ಸಿಂಧನೂರು: ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ನಿರಂತರ ಕುಡಿವ ನೀರಿನ ಯೋಜನೆ ಅನುಷ್ಠಾನ ಸೇರಿ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ಸದಸ್ಯರೊಂದಿಗೆ ನಗರಾಭಿವೃದ್ಧಿ ಬಗ್ಗೆ ಚರ್ಚಿಸಿದರು. ನಗರದ ವಿವಿಧ ವಾರ್ಡ್‌ಗಳ ಮೂಲ ಸೌಕರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ನಗರಕ್ಕೆ ಬೇಕಾದ ಮೂಲ ಸೌಲಭ್ಯಗಳ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ಚರಂಡಿ, ಸಿಸಿ ರಸ್ತೆ ನಿರ್ಮಾಣ, ಉದ್ಯಾನ ಸೇರಿ ಹಲವು ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ನಗರಲ್ಲಿನ ವಿವಿಧ ಸಮಸ್ಯೆಗಳ ಕುರಿತು ನಗರಸಭೆ ಸದಸ್ಯರು ಶಾಸಕ ಬಾದರ್ಲಿ ಗಮನಕ್ಕೆ ತಂದರು. ನಗರಸಭೆ ಸದಸ್ಯರಾದ ಆಲಂಬಾಷಾ, ಕರೀಂಸಾಬ್, ಕೆ.ಜಿಲಾನಿ ಪಾಷಾ, ಮುನೀರ್ ಪಾಷಾ, ಚಂದ್ರಶೇಖರ ಮೈಲಾರ, ಮೆಹಬೂಬ್ ಡೊಂಗ್ರಿ ಇತರರಿದ್ದರು.