ಜಿಲ್ಲೆ

ಬಿಸಿಎ ವಿದ್ಯಾರ್ಥಿಗಳಿಗೆ ಒರಿಯಂಟೇಶನ್ ಪ್ರೋಗ್ರಾಂ

Dharwada - Basavaraj Idli

ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಬಿಸಿಎ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಕೃತಿ ಒರಿಯಂಟೇಶನ್ ಕಾರ್ಯಕ್ರಮ ಬಿವಿಬಿ ಕ್ಯಾಂಪಸ್ ನಲ್ಲಿ ಬುಧವಾರ ಏರ್ಪಡಿಸಲಾಗಿತ್ತು.

ಅತಿಥಿಯಾಗಿದ್ದ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಬಿ. ಕಲಕೋಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪದವಿ ಹಂತ ಅತ್ಯಂತ ಪ್ರಮುಖವಾಗಿರುತ್ತದೆ. ಇಲ್ಲಿ ಕಾಲಹರಣ ಮಾಡದೆ ಶ್ರಧ್ಧೆಯಿಂದ ಅಧ್ಯಯನದ ಕಡೆಗೆ ಗಮನ ಕೊಟ್ಟು ಸಮಾಜದಲ್ಲಿ ಎತ್ತರಕ್ಕೆ ಬೆಳೆಯುವ ಗುರಿ ಹೊಂದಬೇಕು ಎಂದರು.

ಮೋಟಿವೇಟರ್ ಪ್ರವಿಣ ಗುಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ನಂಬಿಕೆ, ಆತ್ಮವಿಶ್ವಾಸದಿಂದ ಗುರಿಗಳ ಕಡೆ ಗಮನ ಕೊಡಲು ಸಾಧ್ಯವಾಗುತ್ತದೆ. ನಿರುದ್ಯೋಗ ತಾಂಡವವಾಡುತ್ತಿರುವ ದೇಶದಲ್ಲಿ ಉದ್ಯಮಶೀಲತೆಯ ಮಹತ್ವ ಬಹಳಷ್ಟಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಬಿಸಿಎ ಪ್ರಾಚಾರ್ಯ ಪ್ರೊ. ಸಿದ್ದಲಿಂಗಪ್ಪಾ ಕಡಕೋಳ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಪೋಷಕರು ಬಹಳಷ್ಟು ಶ್ರಮ ವಹಿಸುತ್ತಾರೆ. ಪೋಷಕರ ಮನೋಭಾವನೆ ಅರಿತು ಅದಕ್ಕೆ ಪೂರಕವಾಗಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಒರಿಯಂಟೇಶನ್ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜು ಜೀವನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತೇವೆ. ವಿವಿಧ ಜಿಲ್ಲೆಗಳಿಂದ 360ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು ಎಂದರು.

ಪ್ರೊ. ವರುಣಿ ಪಾಟೀಲ ಪ್ರಾಥಿರ್ಸಿದರು, ಪ್ರೊ. ಶೋಭಾ ಗಿರಿಜನ್ನವರ ಸ್ವಾಗತಿಸಿದರು, ಪ್ರೊ. ಅತಾ ಸಿ.ಎಸ್., ಪ್ರೊ. ಸಂಪದಾ ಕುಲಕರ್ಣಿ ಅತಿಥಿಗಳನ್ನು ಪರಿಚಯ ಮಾಡಿದರು. ಪ್ರೊ. ಪೂರ್ಣಿಮಾ ಬೆಳಗಲಿ ವಂದಿಸಿದರು. ಪ್ರೊ. ಕೃಪಾ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.