ಜಿಲ್ಲೆ

14 ರಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ

ಗಿರೀಶ ಸಗರ

ವಿಜಯಪುರ: ನಗರದ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಶಸಚಿಕಿತ್ಸಾ ವಿಭಾಗ ಹಾಗೂ ಜಿಲ್ಲಾ ಶಸಚಿಕಿತ್ಸಕರ ಸಂಗಳ ಸಹಯೋಗದಲ್ಲಿ ರಾಷ್ಟ್ರೀಯ ಶಸಚಿಕಿತ್ಸೆ ತಜ್ಞ ವೈದ್ಯರ ದಿನ ಅಂಗವಾಗಿ ಜೂ.14, 15 ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಶಸಚಿಕಿತ್ಸಕರ ಸಂದಿಂದ ಪ್ರಪ್ರಥಮವಾಗಿ ರಾಷ್ಟ್ರೀಯ ಶಸಚಿಕಿತ್ಸಾ ತ ವೈದ್ಯರ ದಿನ ಆಚರಿಸಲು ನಿರ್ಧರಿಸಲಾಗಿದ್ದು, ಜನ ಸಾಮಾನ್ಯರಿಗೆ ಶಸಚಿಕಿತ್ಸೆ ವೈದ್ಯರ ಕಾರ್ಯವೈಖರಿ ಮತ್ತು ಮಹತ್ವ ತಿಳಿಸುವುದು ಹಾಗೂ ಸ್ನಾತಕ ವೈದ್ಯಕಿಯ ವಿದ್ಯಾರ್ಥಿಗಳಲ್ಲಿ ಈ ವಿಭಾಗದ ಬಗ್ಗೆ ಆಸಕ್ತಿ ಹೆಚ್ಚಿಸುವುದೇ ಉದ್ದೇಶವಾಗಿದೆ.

ಜೂ. 14ರಂದು ಮಧ್ಯಾಹ್ನ 3 ರಿಂದ ಸಂಜೆ 5ರ ವರೆಗೆ ಬಿಎಲ್​ಡಿಇ ಡೀಮ್ಡ್​ ವಿವಿಯ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಎಂಬಿಬಿಎಸ್​ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸರ್ಜಿ ಕ್ವಿಜ್​ ನಡೆಯಲಿದೆ.

ಜೂ. 15 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಬಿಎಲ್​ಡಿಇ ಆಸ್ಪತ್ರೆ, ಅಲ್​ಅಮೀನ್​ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಶಸಚಿಕಿತ್ಸೆ ಶಿಬಿರ ನಡೆಯಲಿದೆ.

ಲ್ಲದೆ, ಎರಡೂ ದಿನ ರಕ್ತದಾನ ಶಿಬಿರ ನಡೆಯಲಿದೆ. ಅಂದೇ ಸಂಜೆ 7ಕ್ಕೆ ನಗರದ ಸ್ಟೇಷನ್​ ರಸ್ತೆಯ ಐಎಂಎ ಸಭಾಂಗಣದಲ್ಲಿ ಡಾ. ವಿಕ್ರಮ ಸಿಂದಗಿಕರ ಮತ್ತು ಡಾ. ಸಂಜೀವ ರಾಠೋಡ ಅವರಿಂದ ಉಪನ್ಯಾಸ ಹಾಗೂ ಜಿಲ್ಲೆಯ ಹಿರಿಯ ಶಸಚಿಕಿತ್ಸೆ ವೈದ್ಯರನ್ನು ಸನ್ಮಾನಿಸಲಾಗುವುದೆಂದು ಶಸಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಮತ್ತು ಜಿಲ್ಲಾ ಶಸಚಿಕಿತ್ಸಕರ ಸಂದ ಕಾರ್ಯದರ್ಶಿ ಡಾ. ರಮಾಕಾಂತ ಬಳೂರಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.