ಅಳವಂಡಿ: ಅಂಬೇಡ್ಕರ್ ಸಮಾನತೆ ಸಂಕಲ್ಪದೊಂದಿಗೆ ದೇಶಕ್ಕಾಗಿ ಸಂವಿಧಾನ ರಚಿಸಿದ್ದಾರೆ ಎಂದು ದಲಿತ ಸಂಸ್ಕೃತಿ ಪೀಠ ಕವಿವಿಯ ಸಂಚಾಲಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಹೇಳಿದರು.
ಇದನ್ನೂ ಓದಿ: ಸಮಾನತೆಗೆ ಜೀವನ ಮುಡಿಪಾಗಿಟ್ಟ ಅಂಬೇಡ್ಕರ್
ಸಮೀಪದ ಮುರ್ಲಾಪುರ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಯುವಕ ಸಂಘದಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಯಾರಿಗೂ ಅನ್ಯಾಯ, ದ್ವೇಷ ಮಾಡದೇ ಇರುವಂತಹ ದಲಿತರು ಇಂದು ಅಸ್ಪಶ್ಯರಾಗಿದ್ದಾರೆ. ಇದನ್ನೆಲ್ಲ ಅರಿತ ಅಂಬೇಡ್ಕರ್ ಸರ್ವರಿಗೂ ಸಮಾನತೆ ಸಂಕಲ್ಪದೊಂದಿಗೆ ಈ ದೇಶಕ್ಕೆ ಸಂವಿಧಾನ ರಚಿಸಿ, ಚಲನಶೀಲ ಭಾರತವನ್ನಾಗಿ ಮಾರ್ಪಾಡು ಮಾಡಿದ್ದಾರೆ.
ಸ್ವಾತಂತ್ರ ಬಂದು 75 ವರ್ಷ ಗತಿಸಿದರೂ ಇನ್ನೂ ಅಸ್ಪ ೃಶ್ಯತೆ ಜೀವಂತವಾಗಿದೆ. ಇಂದಿನ ಜನರಲ್ಲಿ ಊರ ಹಬ್ಬ, ಜಾತ್ರೆ, ಮಾಡಬೇಕೆಂಬ ಅರಿವಿದೆ. ಆದರೆ, ಅಂಬೇಡ್ಕರ್ ತತ್ವಾದರ್ಶ ಗುಣಗಳ ಬಗ್ಗೆ ಅರಿವಿಲ್ಲ. ಎಲ್ಲರೂ ಸಂಘಟಿತರಾಗುವ ಮೂಲಕ ಮೂಲ ಹಕ್ಕುಗಳನ್ನು ಪಡೆಯಬೇಕು ಎಂದರು.
ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ್ ಮಾತನಾಡಿ, ಅಂಬೇಡ್ಕರ್ ದೇಶದ ಶಕ್ತಿ ಇದ್ದಂತೆ. ಸಾಮಾಜಿಕ ಪ್ರತೀಕವಾದ ಅಂಬೇಡ್ಕರ್ ಅವರು ದಲಿತರ ಬದುಕಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಯುವಕರು ದುಶ್ಚಟಗಳಿಂದ ಮುಕ್ತರಾಗಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ದಲಿತಪರ ಹೋರಾಟಗಾರ್ತಿ ಸಾವಿತ್ರಿ ಮುಜಮದಾರ, ಜಿ.ಎಂ.ಶಿವಪೂರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ ಪಾಟೀಲ, ಯಮನೂರಪ್ಪ ಕಟಗಾಲಿ, ಬಸವರಾಜ, ಅಂದಾನಗೌಡ್ರ ಪಾಟೀಲ, ದೇವೇಂದ್ರಪ್ಪ ಪೂಜಾರ, ಲಕ್ಷ್ಮಣ್ಣ ತಗಡಿನಮನಿ, ಅಲ್ಲಾಭಕ್ಷಿ, ಡಿ.ಜಿ.ಪೂಜಾರ, ದೇವರಾಜ ಕಿನ್ನಾಳ, ತೋಟಯ್ಯ ಅರಳಲೇಮಠ, ರವಿ ಗುಡದಳ್ಳಿ, ಮುತ್ತು, ರವಿ, ಈರಣ್ಣ, ಯಮನೂರಪ್ಪ, ರಣದಪ್ಪ, ಗೋಣೆಪ್ಪ, ಮಾಲಿಂಗಪ್ಪ, ದೇವರಾಜ, ಮೈಲಪ್ಪ ಇತರರಿದ್ದರು.