BASHIR HAHAMAD HOSAMANI 
ಜಿಲ್ಲೆ

ವೈಚಾರಿಕ ನಾಟಕ ಕೃತಿಗಳ ಸ್ಪರ್ಧೆ ಆಯೋಜನೆ- ಬಷೀರ ಅಹ್ಮದ್ ಹೊಸಮನಿ

ರಾಯಚೂರು ಹೊಸಮನಿ ಪ್ರಕಾಶನ ವತಿಯಿಂದ ವೈಚಾರಿಕ ನಾಟಕ ಕೃತಿಗಳ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತ ಕೃತಿಗಳಿಗೆ ಬಹು ಮಾನ ವಿತರಿಸಲಾಗುತ್ತದೆ ಎಂದು ಪ್ರಕಾಶನದ ಅಧ್ಯಕ್ಷ ಬಷೀರ ಅಹ್ಮದ್ ಹೊಸಮನಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ದೆಯಲ್ಲಿ ಭಾಗವಹಿಸುವ ಕೃತಿಕಾರರು ೨೦೨೪ರಲ್ಲಿ ಪ್ರಕಟವಾಗಿರಬೇಕು. ಜಿಲ್ಲೆಯವರೇ ಆಗಿರಬೇಕು. ಧಾರ್ಮಿಕ ಮತ್ತು ಮೂಢನಂಬಿಕೆ ಬಿತ್ತುವ ಕೃತಿ ಯಾಗಿರಬಾರದು. ಸೃಜನಶೀಲ ಕೃತಿಯಾಗಿರಬೇಕು. ಕಂಪನಿ ನಾಟಕ, ಸಾಮಾಜಿಕನಾ ಟಕಗಳು ಸ್ಪರ್ಧೆಯಲ್ಲಿ ಅವಕಾಶವಿರುವದಿಲ್ಲ. ೨೦೨೪ ಜನವರಿ ೧ ರಿಂದ ಡಿಸೆಂಬರ್ ೩೧ ರೊಳಗೆ ಕೃತಿಗಳು ಸ್ಪರ್ಧೆಗೆ ಅರ್ಹವಾಗಿವೆ.

ಸಂಕಲನ ನಾಟಕಗಳಿಗೆ ಅವಕಾಶವಿರುವದಿಲ್ಲ. ತೀರ್ಪುಗಾರರ ನಿರ್ಧಾರವೇ ಅಂತಿ ಮವಾಗಿದೆ.

ಪ್ರಥಮ ಬಹು ಮಾನವಾಗಿ ೫ ಸಾವಿರರೂ ನಗದು ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನವಾಗಿ ೩ ಸಾವಿರ ರೂ, -Àಲಕ ನೀಡಲಾಗುತ್ತದೆ ಎಂದರು . ಲೇಖಕರು ಹೆಸರು, ವಿಳಾಸ, ಮೊಬೈಲ್ ನಂಬರ್ ಸ್ಪಷ್ಟವಾಗಿ ಬರೆದು ಕೃತಿಯ ಎರಡು ಪ್ರತಿಗಳನ್ನು -É.೨೫ ರೊಳಗೆ ಬಷೀರ ಅಹ್ಮದ ಹೊಸಮನಿ, ಅಧ್ಯಕ್ಷರು, ಹೊಸಮನಿ ಪ್ರಕಾಶನ, ಕನ್ನಡ ಡಿಂಡಿAಮ ನಿಲಯ, ಮನೆ ಸಂಖ್ಯೆ: ೧೪-೨-೨ ೧೫/೯ ಅಮರೇಶ್ವರ ನಗರ,ತಂಪು ಉಗ್ರಾಣದ ಹಿಂದೆ, ಅಸ್ಕಿಹಾಳ ರಾ ಯಚೂರು-೫೮೪೧೦೪, ಮೊಬೈಲ್ ಸಂಖ್ಯೆ: ೭೪೮೩೫೪೯೭೪೪ ಅಥವಾ ೯೯೦೨೫೯೭೩೯೪ ಸಂಪರ್ಕಿಸುವAತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರುದ್ರಯ್ಯ ಗುಣಾರಿ, ರಾಮಲಿಂಗಪ್ಪ ಕುಣ್ಸಿ, ಕೆ.ವೀರೇಶ ಬಾಬು ಇದ್ದರು.