ಮೂಡಿಗೆರೆ: ಮುಂದಿನ ಎಲ್ಲ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ಕಾತರರಾಗಿದ್ದು, ಪಕ್ಷವನ್ನು ಮತ್ತೊಮ್ಮೆ ತಳಮಟ್ಟದಿಂದಗಟ್ಟಿಗೊಳಿಸಿ ಚುನಾವಣೆಗೆ ತಯಾರಾಗಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್ ಹೇಳಿದರು.
ಜೆಡಿಎಸ್ ಕ್ಷೇತ್ರ ಸಮಿತಿಯಿಂದ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಅವಧಿಯನ್ನು ಜನ ಈಗಲೂ ಕೊಂಡಾಡುತ್ತಿದ್ದಾರೆ. ಸಂಚಲನ ಮೂಡುವಂತ ಆಡಳಿತವನ್ನು ದೇವೇಗೌಡರು ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು 2 ಬಾರಿ ಮುಖ್ಯಮಂತ್ರಿಯಾಗಿ ಪರಿಣಾಮಕಾರಿಯಾಗಿ ಆಡಳಿತ ನಡೆಸಿದರಿಂದ ರೈತರು ನೆಮ್ಮದಿಯಾಗಿ ಕೃಷಿ ಚಟುವಟಿಕೆ ನಡೆಸುವಂತಾಗಿದೆ ಎಂದರು.
ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಮಾತನಾಡಿ, ಯುವಕರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಬಲಿಷ್ಠ ಸಂಘಟನೆ ಇದ್ದಾಗ ಮಾತ್ರ ಜನಮನ್ನಣೆ ಪಡೆಯಲು ಸಾಧ್ಯ. ಪ್ರತಿ ಹೋಬಳಿ ಅಧ್ಯಕ್ಷರು ತಮ್ಮ ಹೋಬಳಿಗಳ ಸಭೆ ಆಯೋಜಿಸಿ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸಬೇಕು. ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಕೊರತೆಯಿಲ್ಲ. ಅಲ್ಪಸಂಖ್ಯಾತರು ಜೆಡಿಎಸ್‌ನಿಂದ ದೂರವಾಗಿದ್ದಾರೆ ಎಂಬುದು ತಪ್ಪು ಕಲ್ಪನೆ. ಅಲ್ಪಸಂಖ್ಯಾತರು ಪಕ್ಷವನ್ನು ಹಿಂದಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ಸಾಮೂಹಿಕವಾಗಿ ಜೆಡಿಎಸ್ ಬೆಂಬಲಿಸುವ ಭರವಸೆಯಿದೆ. ಸಂಘಟನೆ ಮೂಲಕ ಕಾರ್ಯಕರ್ತರು ತಮ್ಮ ಶಕ್ತಿ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮಣಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲೋಹಿತ್, ಸುಧಾ, ಆಶಾಲತಾ, ಲಕ್ಷ್ಮಣ್, ಮಂಜಪ್ಪಯ್ಯ, ಜ್ವಾಲನಯ್ಯ, ಶಾಕೀರ್ ಹುಸೇನ್, ಶಬ್ಬೀರ್‌ಅಹಮದ್ ಬೇಗ್, ಜಕರಿಯ ಜಾಕಿರ್, ನಾಸೀರ್, ನೂರುಲ್ಲ, ಅಶೋಕ್, ಮಗ್ಗಲಮಕ್ಕಿ ರವಿ, ಮರ್ಕಲ್ ಚಂದ್ರಣ್ಣ, ರಘು ಗೌಡ, ಚಂದ್ರೇಗೌಡ ಗಬ್ಬಳ್ಳಿ, ಸತೀಶ್ ಮರ್ಕಲ್, ಆದರ್ಶ, ಮನು, ಪ್ರಹ್ಲಾದ್, ತನು ಕೊಟ್ಟಿಗೆಹಾರ, ಸಂದೇಶ್, ಸಂದೀಪ್, ಬಾನಳ್ಳಿ ರಮೇಶ್ ಇತರರಿದ್ದರು.