ವಿಜಯಪುರ: ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಶ್ರಮಿಸಬೇಕೆಂದು ಬೂತ್ ಸಮಿತಿ ಜಿಲ್ಲಾ ಉಸ್ತುವಾರಿ ವಿಠಲ ಕೊಳ್ಳೂರ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಬೂತ್ ಲೆವೆಲ್ ಏಜೆಂಟ್ ನೇಮಕ ಮತ್ತು ಬೂತ್ ಸಮಿತಿ ನೇಮಕಾತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಲೋಕಸಭೆ ಚುನಾವಣೆಗೆ ಯಾವಾಗ ಬೇಕಾದರೂ ಅಧಿಸೂಚನೆ ಪ್ರಕಟಗೊಳ್ಳಬಹುದು. ಹೀಗಾಗಿ ಈಗಿನಿಂದಲೇ ಸಿದ್ಧತೆ ಕೈಗೊಳ್ಳಬೇಕು.
ಬೂತ್‌ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿಸಲು ಶ್ರಮಿಸಬೇಕು. ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕೆಂದರು.
ಜಿಲ್ಲಾಧ್ಯಕ್ಷ ರಾಜು ಆಲಗೂರ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ ಅಹ್ಮದ ಬಕ್ಷಿ ತರಬೇತಿ ಶಿಬಿರದ ಕುರಿತು ಮಾತನಾಡಿದರು.
ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವಿಶ್ವನಾಥ ಮಠ, ವಿದ್ಯಾರಾಣಿ ತುಂಗಳ, ರಫಿಕ್ ಪಕಾಲೆ, ಸಿದ್ದು ಗೌಡನ್ನವರ, ಬಾಳನಗೌಡ ಪಾಟೀಲ, ಬಶೀರ ಶೇಠ, ರಮೇಶ ಗುಬ್ಬೇವಾಡ, ಹನೀಫ ಮಕಾನದಾರ, ನಿಂಗಪ್ಪ ಸಂಗಾಪೂರ, ಲಾಲಸಾಬ ಕೊರಬು, ಬೀರಪ್ಪ ಜುಮನಾಳ, ವಸಂತ ಹೊನಮೊಡೆ, ಅಶ್ಫಾಕ ಮನಗೂಳಿ, ಹಾಜಿಲಾಲ ದಳವಾಯಿ, ವಿಜಯಕುಮಾರ ಘಾಟಗೆ, ಅಬುಬಕರ ಬಿಜಾಪುರ, ಬಾಬು ಯಾಳವಾರ, ಪರಶುರಾಮ ಹೊಸಮನಿ, ಗಂಗೂಬಾಯಿ ಧುಮಾಳೆ, ರಾಜೇಶ್ವರಿ ಚೋಳಕೆ, ಸರಿತಾ ನಾಯಕ ಮತ್ತಿತರರಿದ್ದರು.