ಸಂಡೂರು ತಾಲೂಕು ದರೋಜಿಯಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಸಭೆಯಲ್ಲಿ ತಾಲೂಕು ಅಧ್ಯಕ್ಷ ವಿ.ದೇವಣ್ಣ ಮಾತನಾಡಿದರು. ಸಿಐಟಿಯು ಮುಖಂಡ ಎನ್.ಶಂಕ್ರಣ್ಣ, ಗ್ರಾಮ ಘಟಕದ ಅಧ್ಯಕ್ಷ ವಿ.ಟಿ.ತಿಮ್ಮಪ್ಪ, ಉಪಾಧ್ಯಕ್ಷ ವಿ.ಬಿ.ವೆಂಕಟೇಶ, ಕಾರ್ಯದರ್ಶಿ ವಿ.ಬಿ.ದೇವಣ್ಣ, ಸಹ ಕಾರ್ಯದರ್ಶಿ ವಿ.ರಾಮು, ಖಜಾಂಚಿ ವಿ.ಮಲ್ಲಿಕಾರ್ಜುನ, ಗೋವಿಂದಮ್ಮ, ಅಂಜನಮ್ಮ ಇತರರಿದ್ದರು. 
ಜಿಲ್ಲೆ

ಸಂಘಟಿತರಾಗಿ ಹೋರಾಡಿ ಸೌಲಭ್ಯ ಪಡೆಯಿರಿ

ರುದ್ರಪ್ಪ ವಾಲಿ

ಸಂಡೂರು: ಕಟ್ಟಡ ಕಾರ್ಮಿಕರು ಯಾವುದೇ ತರಬೇತಿ ಕೇಂದ್ರಗಳಿಗೆ ತೆರಳದೆ, ಹಿರಿಯ ಕೆಲಸಗಾರರನ್ನು ನೋಡಿಕೊಂಡು ಕೆಲಸ ಮಾಡುವುದನ್ನು ಕಲಿತಿದ್ದಾರೆ ಎಂದು ತಾಲೂಕು ಅಧ್ಯಕ್ಷ ವಿ.ದೇವಣ್ಣ ಹೇಳಿದರು.

ದರೋಜಿಯಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಸಭೆಯಲ್ಲಿ ಭಾನುವಾರ ಮಾತನಾಡಿದರು. ಕಟ್ಟಡ ಕಾರ್ಮಿಕರ ಜೀವನ ಸ್ಥಿತಿ ಶೋಚನೀಯವಾಗಿದೆ. ಜಿಎಸ್‌ಟಿ ಸೇರಿದಂತೆ ಬೆಲೆ ಏರಿಕೆಯಿಂದ ಕಟ್ಟಡ ನಿರ್ಮಾಣ ಕೆಲಸಗಳು ಬಹಳಷ್ಟು ಕಡಿಮೆಯಾಗಿವೆ ಎಂದು ತಿಳಿಸಿದರು.

ಶೇ.30 ಮಹಿಳೆಯರು ನಿರ್ಮಾಣ ವಲಯದಲ್ಲಿ ದುಡಿಮೆ ಮಾಡುತ್ತಿದ್ದಾರೆ. ಇವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸೌಲಭ್ಯ ಸಿಗುತ್ತಿಲ್ಲ. ಕಾರ್ಮಿಕರಿಗೆ ಮಂಡಳಿಯಿಂದ ಸಿಗುವ ಪಿಂಚಣಿ, ಕುಟುಂಬ ಪಿಂಚಣಿ ಸೌಲಭ್ಯ, ಹೆರಿಗೆ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಅಪಘಾತ ಪರಿಹಾರ, ಮದುವೆ ಸಹಾಯಧನವನ್ನು ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಪಡೆಯಬೇಕು ಎಂದರು.