ಸಂಡೂರು: ಲಕ್ಷಾಂತರ ಕಾರ್ಮಿಕರು ಅಪಾಯ ಸನ್ನಿವೇಶ ಹಾಗೂ ಸುರಕ್ಷತೆ ಇಲ್ಲದ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಂಚಾಲಕ ವಿ.ದೇವಣ್ಣ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಸಿ.ಲಕ್ಕಲಹಳ್ಳಿಯಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಗ್ರಾಮ ಘಟಕದ ಸಮಾವೇಶಲ್ಲಿ ಮಾತನಾಡಿದರು.
ಸಾಮಾಜಿಕ ಭದ್ರತೆಯ ಸೌಲಭ್ಯಗಳಿಂದ ಕಾರ್ಮಿಕರನ್ನು ವಂಚಿತರನ್ನಾಗಿಸಲಾಗಿದೆ.
ಕಲ್ಯಾಣ ಮಂಡಳಿಯಿಂದ ಸಿಗುವ ಪಿಂಚಣಿ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ ಪ್ರಮುಖ ವೈದ್ಯಕೀಯ ಸಹಾಯಧನ, ಮದುವೆ ಶೈಕ್ಷಣಿಕ ಸಹಾಯಧನ ಅಪಘಾತ ಪರಿಹಾರ, ತಾಯಿ ಮಗುವಿನ ಸಹಾಯ ಹಸ್ತ ಹೀಗೆ ಸೌಲಭ್ಯಗಳು ಜಾರಿಯಲ್ಲಿ ಇವೆ. ಸಂಘಟತರಾಗಿ ಹೋರಾಟ ಮಾಡುವ ಮೂಲಕ ಸೌಲಭ್ಯಗಳು ಪಡೆದುಕೊಳ್ಳಬೇಕು. ಸೆ.22ರಂದು ಸಂಡೂರು ಕಾರ್ಮಿಕ ಇಲಾಖೆ ಮುಂದೆ ನಡೆಯುವ ಹೋರಾಟದಲ್ಲಿ ಭಾಗವಹಿಸಲು ಮನವಿ ಮಾಡಿದರು.
ಪ್ರಮುಖರಾದ ಗವಿಸಿದ್ದಪ್ಪ, ಕಾರ್ಯದರ್ಶಿ ಕೆ.ಚಂದ್ರಶೇಖರ್, ಸಹ ಕಾರ್ಯದರ್ಶಿಗಳಾಗಿ ಗಂಗಾಧರ, ವೆಂಕಟೇಶ, ಖಜಾಂಚಿ ರಾಜಪ್ಪ ಇತರರಿದ್ದರು.