ಬೀಳಗಿ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಬಸವಣ್ಣ ಜಯಂತಿ ಅಂಗವಾಗಿ ತಹಸೀಲ್ದಾರ್ ವಿನೋದ ಹತ್ತಳ್ಳಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ತಾಪಂ ಪರಭಾರಿ ಇಒ ಶ್ರೀನಿವಾಸ ಪಾಟೀಲ, ಸುನಿಲ ಹೂಗಾರ, ಮಂಜುನಾಥ ಬೋಕಿ, ಸಂಗಪ್ಪ ಎತ್ತಿನಮನಿ ಮತ್ತಿತರರಿದ್ದಾರೆ. 
ಜಿಲ್ಲೆ

ಬಸವಣ್ಣನವರ ಜಯಂತಿ ಅಚ್ಚುಕಟ್ಟಾಗಿ ಆಯೋಜಿಸಿ

ಬೀಳಗಿ: ಪಟ್ಟಣದಲ್ಲಿ ಏ.30 ರಂದು ಜಗಜ್ಯೊತಿ ಬಸವಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಬೇಕು. ಅಂದು ಆಯಾ ಇಲಾಖೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಂದು ತಮಗೆ ನೀಡಿದ ಜವಾಬ್ದಾರಿ ನಿಭಾಯಿಸಬೇಕು ಎಂದು ತಹಸೀಲ್ದಾರ್ ವಿನೋದ ಹತ್ತಳ್ಳಿ ಹೇಳಿದರು.

ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಬಸವಣ್ಣ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಎಲ್ಲ ಮಹಾತ್ಮರ ಜಯಂತಿ ಆಚರಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರದ ಜತೆಯಲ್ಲಿ ವಿವಿಧ ಸಮಾಜದ ಮುಖಂಡರು ತಮ್ಮ ಸಲಹೆಗಳನ್ನು ನೀಡಬೇಕು ಎಂದರು.

ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಸವ ವೃತ್ತದಲ್ಲಿರುವ ಬಸವೇಶ್ವರ ಕಂಚಿನ ಮೂರ್ತಿಗೆ ಬೆಳಗ್ಗೆ 10 ಗಂಟೆಗೆ ಪೂಜಾ ಕಾರ್ಯಕ್ರಮ ನೆರವೇರಲಿದೆ. ಸಂಜೆ 5 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ವಚನ ಗಾಯನ ಹಾಗೂ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗುವುದು ಎಂದರು.

ತಾಪಂ ಪರಭಾರಿ ಇಒ ಶ್ರೀನಿವಾಸ ಎಸ್.ಪಾಟೀಲ, ಅಬಕಾರಿ ಅಧೀಕ್ಷಕ ಸುನಿಲ ಹೂಗಾರ, ಹೆಸ್ಕಾಂ ಎಇಇ ಮಂಜುನಾಥ ಬೋಕಿ, ಸಿಡಿಪಿಓ ಕವಟೇಕರ, ಶಿಕ್ಷಣ ಇಲಾಖೆ ದೈಹಿಕ ಪರಿವಿಕ್ಷಕ ಸಂಗಪ್ಪ ಎತ್ತಿನಮನಿ, ಗ್ರಾಮದ ಹಿರಿಯಾದ ವಿ.ಜಿ. ರೆವಡಿಗರ, ಬಸವಂತಪ್ಪ ಸಂಕನಟ್ಟಿ, ಡಿಎಸ್‌ಎಸ್ ಮುಖಂಡ ಮಹದೇವ ಹದಿಮನಿ, ಪಡಿಯಪ್ಪ ಕಳ್ಳಿಮನಿ, ಮಾಜಿ ಪಪಂ ಅಧ್ಯಕ್ಷ ಅನಿಲ ಗಚ್ಚಿನಮನಿ, ಯಲ್ಲಪ್ಪ ಮೇಟಿ, ಶಿವಾನಂದ ಸರಾವರಿ, ರವಿ ಪಾಟೀಲ ಮತ್ತಿತರರಿದ್ದರು.