ಜಿಲ್ಲೆ

ಗ್ರಾಪಂ ಮಟ್ಟದಲ್ಲಿ ವಿಮಾ ಅಭಿಯಾನ ಆಯೋಜಿಸಲಿ

ರಾಮನಗರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್​ಗಳು ಸಾರ್ವಜನಿಕರಿಗೆ ಕೃಷಿ, ವ್ಯಾಪಾರ, ಗೃಹ, ವಿದ್ಯಾಭ್ಯಾಸ ಸಾಲಕ್ಕೆ ಒತ್ತು ನೀಡಬೇಕು ಎಂದು ಸಂಸದ ಡಾ. ಸಿ.ಎನ್​. ಮಂಜುನಾಥ್​ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024&25ನೇ ಸಾಲಿನ ಬ್ಯಾಂಕುಗಳ ಜಿಲ್ಲಾ ಸಲಹಾ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಬ್ಯಾಂಕ್​ನವರು ಜಿಪಂ ಸಹಯೋಗದೊಂದಿಗೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಮಾ ಅಭಿಯಾನ ಆಯೋಜಿಸಿ, ಜನರಲ್ಲಿ ಈ ಕುರಿತು ಅರಿವು ಮೂಡಿಸಿ, ಹೆಚ್ಚಿನ ಜನರು ಈ ಯೋಜನೆಯ ಸವಲತ್ತನ್ನು ಪಡೆದುಕೊಳ್ಳಲು ಕ್ರಮವಹಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್​ ಜೈನ್​ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಬ್ಯಾಂಕುಗಳು ಹೆಚ್ಚಿನ ಸಾಲ ಸೌಲಭ್ಯ ತ್ವರಿತಗತಿಯಲ್ಲಿ ಜನರಿಗೆ ಒದಗಿಸಬೇಕು ಹಾಗೂ ಬ್ಯಾಂಕ್​ಗಳು ಕ್ರೆಡಿಟ್​ ಕ್ಯಾಂಪ್​ಗಳನ್ನು ಆಯೋಜಿಸಬೇಕು. ಎಲ್ಕ ಬ್ಯಾಂಕ್​ಗಳು ಸಿ.ಡಿ ಅನುಪಾತವನ್ನು ಶೇ. 60ಕ್ಕಿಂತ ಹೆಚ್ಚು ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇದಕ್ಕೆ ಬೇಕಾಗಿರುವ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.

ಬೆಂಗಳೂರು ದಣ ಜಿಲ್ಲೆಯ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್​ನ ಮುಖ್ಯ ವ್ಯವಸ್ಥಾಪಕ ಮೋಹನ್​ ಕುಮಾರ್​ ವೈ.ಎನ್​. ಮಾತನಾಡಿ, ಜಿಲ್ಲೆಯಲ್ಲಿ 2024&25ನೇ ಸಾಲಿನ ವಾರ್ಷಿಕ ಗುರಿಯಲ್ಲಿ 12,905 ಕೋಟಿ ರೂ.ಗಳಗೆ 15,277 ಕೋಟಿ (ಶೇ. 118.38) ರೂ.ಗಳಷ್ಟು ಗುರಿ ಸಾಧಿಸಿದೆ ಎಂಧರು.

ಪ್ರಧಾನ ಮಂತ್ರಿ ಕಿರು ಉಳಿತಾಯ, ಕಿರು ವಿಮೆಗಳು (ಪಿಎಂಜೆಜೆಬಿವೈ ಹಾಗೂ ಪಿಎಂಎಸ್​ಬಿವೈ), ಪಿಂಚಣಿ ಮತ್ತು ಕೇಂದ್ರ ಸರ್ಕಾರ ಪ್ರಾಯೋಜಿತ ಸಾಲಗಳಾದ ಮುದ್ರಾ ಯೋಜನೆ, ಪಿ.ಎಂ. ವಿಶ್ವಕರ್ಮ, ಪಿ.ಎಂ. ಸ್ವಾನಿಧಿ, ಪಿ.ಎಂ.ಎಫ್​.ಎಂ.ಇ, ಪಿ.ಎಂ.ಇ.ಜಿ.ಪಿ ಯೋಜನೆ, ರಾಜ್ಯ ಸರ್ಕಾರದ ಪ್ರಾಯೋಜಿತ ಹಾಗೂ ಜಿಲ್ಲೆಗೆ ಸಂಬಂಧಿಸಿದ ಸಾಲ ಸೌಲಭ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು.

2025&26ನೇ ಸಾಲಿನ ಡಿಸ್ಟ್ರಿಕ್​ ಕ್ರೆಡಿಟ್​ ಪ್ಲಾ$್ಯನ್​ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು.

ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದ ಲೀಡ್​ ಬ್ಯಾಂಕ್​ ಅಧಿಕಾರಿ ಇಲ್ಲಾಸಾಹು, ನಬಾರ್ಡ್​ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಬಿ.ವಿ. ಹರ್ಷಿತಾ, ಮೈಸೂರಿನ ಯೂನಿಯನ್​ ಬ್ಯಾಂಕ್​ನ ಪ್ರಾದೇಶಿಕ ಮುಖ್ಯಸ್ಥ ರಾಜ್​ಕುಮಾರ್​, ಮಂಡ್ಯದ ಕೆನರಾ ಬ್ಯಾಂಕ್​ನ ಪ್ರಾದೇಶಿಕ ಮುಖ್ಯಸ್ಥೆ ಅನುರಾದ, ಲೀಡ್​ ಬ್ಯಾಂಕ್​ ಶಾಖೆಯ ಅಧಿಕಾರಿ ನಂದರಾಜು, ಸುಮಲತಾ ಸೇರಿ ಇತರರು ಇದ್ದರು.