ಜಿಲ್ಲೆ

ಶೈಣಿಕ ಹಕ್ಕಿನಿಂದ ಶಿಕ್ಷಣವಂತರಾಗಿ ಅಲೆಮಾರಿಗಳ ಜಾಗೃತಿ ಸಭೆ ಆಯೋಜಿಸಿ

ಗುಳೇದಗುಡ್ಡ:ಪರಿಶಿಷ್ಟ ಜಾತಿ, ಪಂಗಡದ ಸಮುದಾಯಗಳ ನಿವಾಸಿಗಳು ಯಾವುದೇ ಸಮಸ್ಯೆ ಇದ್ದರೂ ಸಮಾಜ ಕಲ್ಯಾಣ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಂಡುಕೊಳ್ಳಬೇಕಲ್ಲದೆ, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಒಂದು ವಾರದಲ್ಲಿ ಸಮುದಾಯ ಜಾಗೃತಿ ಸಭೆ ನಡೆಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಜಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ಕೊರವರ ಸಮುದಾಯ ವಾಸ ಮಾಡುವ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ಡಾ.ಬಾಬಾಸಾಹೇಬ ಅಂಬೇಡ್ಕರ್​ ಅವರು ಕೊಟ್ಟಿರುವ ಸಂವಿಧಾನಿಕ ಶೈಣಿಕ ಹಕ್ಕಿನಿಂದಾಗಿ ತುಳಿತಕ್ಕೆ ಒಳಗಾದವರು ಶಿಕ್ಷಣವಂತರಾಗಿದ್ದಾರೆ. ದೊಡ್ಡ ಹುದ್ದೆ ಪಡೆದು ಅಧಿಕಾರಿಗಳಾಗಿದ್ದಾರೆ. ರಾಜ್ಯ, ರಾಷ್ಟ್ರದ ಆಳ್ವಿಕೆ ನಡೆಸಿದ್ದಾರೆ ಎಂದರು.

ಸಮಾಜಕಲ್ಯಾಣ ಇಲಾಖೆಯ ಮಹಾಂತೇಶ ಮಳೀಮಠ, ತಾಲೂಕು ಆರೋಗ್ಯಾಧಿಕಾರಿ ಎಂ.ಬಿ. ಪಾಟೀಲ, ಪುರಸಭೆ ಮ್ಯಾನೇಜರ್​ ಎ.ಎಚ್​. ಮುದ್ದೇಬಿಹಾಳ, ಪುರಸಭೆ ಸದಸ್ಯ ಯಲ್ಲಪ್ಪ ಮನ್ನಿಕಟ್ಟಿ, ಅಖಿಲ ಕರ್ನಾಟಕ ಕುಳವ ಮಹಾ ಸಂದ ರಾಜ್ಯ ಸಮಿತಿ ನಾಮ ನಿರ್ದೇಶಿತ ಸದಸ್ಯ, ಜಿಲ್ಲಾಧ್ಯ ಶ್ಯಾಮಸುಂದರ ಭಜಂತ್ರಿ, ವಾಲ್ಮೀಕಿ ಸಮಾಜದ ಅಧ್ಯ ಕೀರಪ್ಪ ತಳವಾರ, ಗುರು ಭಜಂತ್ರಿ, ಕೋನಪ್ಪ ಭಜಂತ್ರಿ, ಎ.ಕೆ.ಎಂ.ಎಸ್​. ಅಧ್ಯ ಶಿವಾನಂದ ಭಜಂತ್ರಿ ಇದ್ದರು.

ಗುಳೇದಗುಡ್ಡ ಪಟ್ಟಣಕ್ಕೆ ಭೇಟಿ ನೀಡಿದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಜಿ. ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.