ಮೈಸೂರು: ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಸಂಘಟನಾತ್ಮಕ ಪ್ರಯತ್ನ ಮಾಡಲಾಗುವುದು ಎಂದು ಬಿಜೆಪಿ ಗ್ರಾಮಾಂತರ ನೂತನ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ ಕುಂಬ್ರಳ್ಳಿ ತಿಳಿಸಿದರು.
ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಪಕ್ಷದ ಕಚೇರಿಗೆ ಶನಿವಾರ ಆಗಮಿಸಿದ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಬಿಜೆಪಿ ಈ ಬಾರಿ ನಾಯಕ ಸಮುದಾಯಕ್ಕೆ ಸಂಘಟನಾತ್ಮಕ ಅವಕಾಶ ನೀಡಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸಿ ಪಕ್ಷದ ಅಭ್ಯರ್ಥಿಗಳು ಹೆಚ್ಚು ಗೆಲ್ಲುವಂತೆ ಶ್ರಮಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಮುನ್ನಡೆಯುತ್ತೇನೆ ಎಂದು ಹೇಳಿದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿಂದುವಳ್ಳಿ ಕೆಂಪಣ್ಣ, ಬಿಜೆಪಿ ಮುಖಂಡರಾದ ಎಸ್.ಮಹದೇವಯ್ಯ, ಸುರೇಶ್‌ಬಾಬು, ಕೃಷ್ಣಪ್ಪಗೌಡ, ಗೋಪಾಲ್ ರಾವ್, ವಸಂತ್, ಬಾಲಕೃಷ್ಣ, ಮಹೇಶ್ ಮಾಡವಾಡಿ, ಕಿರಣ್ ಜೈ ರಾಮ್ ಗೌಡ, ರಮೇಶ್ ವಿನಯ್, ಗಿರೀಶ್ ಕೋಟೆ, ಮಲ್ಲಾರಾಜನ ಹುಂಡಿ ಗುರುಸ್ವಾಮಿ, ಜಿಲ್ಲಾ ವಕ್ತಾರ ದಯಾನಂದ್ ಪಟೇಲ್, ಎಸ್.ಸಿ.ಮೋರ್ಚಾ ಮೈಸೂರು ನಗರ ಅಧ್ಯಕ್ಷ ಶೈಲೆಂದ್ರ, ಮಾಧ್ಯಮ ಸಹ ಸಂಚಾಲಕ ಬಿ.ಎಂ.ಸಂತೋಷ್‌ಕುಮಾರ್, ಆದಿ ದೇವಲಪುರ, ಮಲ್ಲೇಶ್ ಇತರರು ಇದ್ದರು.