ಜಿಲ್ಲೆ

ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕ್ರೀಡಾಕೂಟ ಆಯೋಜನೆ

ಮೈಸೂರು:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಫೆ.23 ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗದವರಿಗೆ ಕ್ರೀಡಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿರುತ್ತದೆ.

ಪುರುಷರಿಗೆ: 100 ಮೀ. ಓಟ(40 ವರ್ಷದೊಳಗಿನ ಮತ್ತು 40 ವರ್ಷ ಮೇಲ್ಪಟ್ಟವರಿಗೆ), ಶಾಟ್‌ಪುಟ್, 400 ಮೀ ವಾಕ್, ಕ್ರಿಕೆಟ್ , ವಾಲಿಬಾಲ್, ಹಗ್ಗ – ಜಗ್ಗಾಟ, ಮ್ಯೂಸಿಕಲ್ ಛೇರ್, ಶೂಟ್ ಇನ್ ದ ಬ್ಯಾಸ್ಕೆಟ್. ಮಹಿಳೆಯರಿಗೆ: 60 ಮೀ. ಓಟ(35 ವರ್ಷದೊಳಗಿನ ಮತ್ತು 35 ವರ್ಷ ಮೇಲ್ಪಟ್ಟವರಿಗೆ), ಶಾಟ್‌ಪುಟ್, 400 ಮೀ ವಾಕ್, ಥ್ರೋಬಾಲ್, ಹಗ್ಗ – ಜಗ್ಗಾಟ, ಮ್ಯೂಸಿಕಲ್ ಛೇರ್, ಶೂಟ್ ಇನ್ ದ ಬ್ಯಾಸ್ಕೆಟ್, ಲೆಮನ್ ಇನ್ ದ ಸ್ಪೂನ್ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮೆಡಲ್ಸ್, ಟ್ರೋಫಿ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದೂ.ಸಂ: 0821-2546179 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.