ಸೊರಬದ ಶ್ರೀ ಸಾಯಿ ವೃದ್ಧಾಶ್ರಮದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ಶ್ರೀಪಾದ ಬಿಚ್ಚುಗತ್ತಿ ಉದ್ಘಾಟಿಸಿದರು. ಈಶ್ವರಪ್ಪ ಕೆರೆಕೊಪ್ಪ, ಚೂಡಾಮಣಿ, ಪುಟ್ಟರಾಜ್ ಇತರರಿದ್ದರು. 
ಜಿಲ್ಲೆ

ಕ್ರಿಯಾಶೀಲ ಚಟುವಟಿಕೆಗಳಿಂದ ಸಂಘಟನೆ ಬಲಿಷ್ಠ

Shivamogga - Desk - Vinayakumar D B

ಸೊರಬ: ನಿರಂತರ ಕ್ರಿಯಾಶೀಲ ಚಟುವಟಿಕೆಗಳಿಂದ ಸಂಘಗಳ ಬಲವರ್ಧನೆ ಸಾಧ್ಯ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.

ಪಟ್ಟಣದ ಶ್ರೀ ಸಾಯಿ ವೃದ್ಧಾಶ್ರಮದಲ್ಲಿ ಶನಿವಾರ ತಾಲೂಕು ಛಾಯಾಗ್ರಾಹಕರ ಸಂಘ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಛಾಯಾಗ್ರಾಹಣಕ್ಕೆ ತನ್ನದೇ ಆದ ಇತಿಹಾಸವಿದೆ. ಆಧುನಿಕ ಆವಿಷ್ಕಾರಗಳ ಪ್ರತಿಫಲವಾಗಿ ಛಾಯಾಗ್ರಾಹಕರು ನಿತ್ಯ ಸವಾಲು ಎದುರಿಸುವಂತಾಗಿದೆ. ಪರಿಸರ ಸಂರಕ್ಷಣೆ ಜತೆಗೆ ಜೀವ ಸಂಕುಲಗಳನ್ನು ನಾಡಿನ ಜನತೆಗೆ ಅನಾವರಣಗೊಳಿಸಲು ಛಾಯಾಗ್ರಹಣ ಪ್ರಮುಖ ಪಾತ್ರವಹಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ವಿಶೇಷ ಗೌರವವಿದ್ದು, ಛಾಯಾಗ್ರಾಹಕರ ದಿನಾಚರಣೆಯನ್ನು ಶ್ರೀ ಸಾಯಿ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. ಜೀವನಶೈಲಿ ಬದಲಾವಣೆಯಿಂದಾಗಿ ಹೆತ್ತವರನ್ನೇ ದೂರವಿಡುವ ಕಾಲ ಬಂದಿರುವುದು ವಿಷಾದದ ಸಂಗತಿ ಎಂದರು.
ಸಂಘದ ಅಧ್ಯಕ್ಷ ಈಶ್ವರಪ್ಪ ಕೆರೆಕೊಪ್ಪ ಮಾತನಾಡಿ, ವ್ಯಕ್ತಿಗಿಂತ ಸಂಘಟನೆ ದೊಡ್ಡದು. ಛಾಯಾಗ್ರಾಹಣದ ಆಚೆಗೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘವನ್ನು ವಿನೂತನವಾಗಿ ಕಟ್ಟೋಣ ಎಂದರು.
ಪಿಡಿಒ ಚೂಡಾಮಣಿ, ವೃದ್ಧಾಶ್ರಮದ ವ್ಯವಸ್ಥಾಪಕ ಪುಟ್ಟರಾಜ್, ವ್ಯವಸ್ಥಾಪಕಿ ಚೇತನಾ, ಚೆನ್ನಬಸಪ್ಪ, ಛಾಯಗ್ರಾಹಕರಾದ ಲೋಕೇಶ್, ಮೋಹನ್ ಸುರಭಿ, ರವಿ, ದಯಾನಂದ, ಸುಮಾ, ವಿಜಯಕುಮಾರ್ ಬಾಂಬೂರೆ, ಪ್ರವೀಣ್, ಅರುಣ್, ಅಣ್ಣಪ್ಪ, ರಂಗನಾಥ್, ರಾಜೇಂದ್ರ, ಗಿರೀಶ್ ಇತರರಿದ್ದರು.