ಜಿಲ್ಲೆ

ಸಾವಯವ ಕೃಷಿ ಪದ್ಧತಿ ಉತ್ತಮ

ಸೋಮಲಿಂಗ ತಳವಾರ

ಬೈಲಹೊಂಗಲ: ಕೃಷಿ ಮಾಡುವುದು ಇಂದು ಅತ್ಯಂತ ಕ್ಲಿಷ್ಟಕರವಾಗಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತ ಈಶಪ್ರಭು ಕಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕಷಿ ವಿವಿ, ಕೆವಿಕೆ ಮತ್ತಿಕೊಪ್ಪ, ಕಷಿ ಹಾಗೂ ವಿವಿಧ ಸಂಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್​ ಕೃಷಿಮೇಳ ಹಾಗೂ ಜಾನುವಾರು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ರೆತರು ಲವತ್ತಾದ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಸಾವಯವ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ. ಸಾವಯುವ ಕಷಿಯ ಇಳುವರಿ ಉತ್ತಮ ಎಂದರು.

ಶಾಸಕರಾದ ಮಹಾಂತೇಶ ಕೌಜಲಗಿ ಮಾತನಾಡಿ, ಪಟ್ಟಣದ ಜಾನುವಾರು ಮಾರುಕಟ್ಟೆ ಹಾಗೂ ಕಷಿ ಉತ್ಪನ್ನ ಮಾರುಕಟ್ಟೆಗೆ ಕಾಯಕಲ್ಪ ನೀಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮತ್ತೆ ಅಭಿವದ್ಧಿ ಪಡಿಸಲು ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಯುವಪೀಳಿಗೆ ಕಷಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಿದಾಗ ಮಾತ್ರ ಬದುಕು ಬೆಳಕು ಕಾಣಲು ಸಾಧ್ಯವಿದೆ. ಸರ್ಕಾರಗಳು ರೆತರಿಗೆ ಮೂಲಸೌಕರ್ಯ ಒದಗಿಸಬೇಕು ಎಂದರು.

ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಪ್ರಭಾ ಅಕ್ಕ ಸಾನ್ನಿಧ್ಯ ವಹಿಸಿದ್ದರು.

ವಕೀಲ ಎ್​.ಎಸ್​. ಸಿದ್ದನಗೌಡರ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಬಾಬಾಸಾಹೇಬ ಪಾಟೀಲ, ಕೃಷಿಮೇಳದ ಅಧ್ಯ ಶಿವರಂಜನ ಬೋಳನ್ನವರ, ಉಸ್ತುವಾರಿ ಮಹೇಶ ಬೆಲ್ಲದ, ಜಾನುವಾರ ಮೇಳ ಅಧ್ಯ ಮಡಿವಾಳಪ್ಪ ಹೋಟಿ, ಮಹಾಂತೇಶ ತುರಮರಿ, ಎಪಿಎಂಸಿ ಕಾರ್ಯದರ್ಶಿ ಎಸ್​.ಎಸ್​.ಅರಳೀಕಟ್ಟಿ, ಮಹಾಂತೇಶ ಮತ್ತಿಕೊಪ್ಪ, ಬಸವರಾಜ ಜನ್ಮಟ್ಟಿ, ಸುಭಾಸ ತುರಮರಿ, ಸಿ.ಕೆ.ಮೆಕ್ಕೆದ, ಮುರಗೇಶ ಗುಂಡ್ಲೂರ, ಶ್ರೀಶೆಲ ಯಡಳ್ಳಿ, ಗುರು ಮೆಟಗುಡ್ಡ, ಬಿ.ಬಿ.ಗಣಾಚಾರಿ, ಡಾ.ಸಿ.ಬಿ.ಗಣಾಚಾರಿ, ಸಿ.ಆರ್​.ಪಾಟೀಲ, ಮಹಾಂತೇಶ ಜಿಗಜಿನ್ನಿ, ಬಾಬುಸಾಬ ಸುತಗಟ್ಟಿ, ವಿರೂಪಾಯ್ಯ ಕೋರಿಮಠ ಇತರರಿದ್ದರು.