ಸಿಂಧನೂರಿನಲ್ಲಿ ನಬಾರ್ಡ್ ರಾಯಚೂರು ಮತ್ತು ಕಿಸಾನ ಭಾರತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕಲಾವತಿ ಎನ್.ಉದ್ಘಾಟಿಸಿದರು. ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ, ಎನ್‌ಎಸ್‌ಜಿ ಕಮಾಂಡೋ ರೇಣುಕಾ, ಉಪನ್ಯಾಸಕಿ ವಿಜಯಲಕ್ಷ್ಮೀ, ಮಾನಮ್ಮ ಪೂಜಾರಿ ಇದ್ದರು. 
ಜಿಲ್ಲೆ

ಸಾವಯವ ಕೃಷಿಗೆ ನಬಾರ್ಡ್‌ದಿಂದ ಉತ್ತೇಜನ

Kopala - Desk - Eraveni

ಸಿಂಧನೂರು: ನಬಾರ್ಡ್ ಸಾವಯವ ಕೃಷಿಗೆ ಉತ್ತೇಜನ ನೀಡುವ ಜತೆಗೆ ಸ್ವಸಹಾಯ ಸಂಘಗಳ ಆರ್ಥಿಕ ಬಲ ಹೆಚ್ಚಿಸಲು ಸಹಕಾರ ನೀಡುತ್ತಿದೆ ಎಂದು ನಿವೃತ್ತ ಉಪನ್ಯಾಸಕಿ ಡಾ.ಮಧುಮತಿ ದೇಶಪಾಂಡೆ ಹೇಳಿದರು.

ನಗರದ ಕನಕಮಂಗಲ ಭವನದಲ್ಲಿ ಶನಿವಾರ ನಬಾರ್ಡ್ ರಾಯಚೂರು ಮತ್ತು ಕಿಸಾನ್ ಭಾರತಿ ಟ್ರಸ್ಟ್‌ನಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುಡಕಟ್ಟು ಜನಾಂಗ ಅಭಿವೃದ್ಧಿ ಯೋಜನೆಯಡಿ ಸುಮಾರು 500 ರೈತ ಕುಟುಂಬಗಳು ಕೃಷಿ ಜತೆಗೆ ತೋಟಗಾರಿಕೆ ಬೆಳೆ ಬೆಳೆಯುವಂತೆ ಪ್ರೇರೇಪಿಸುತ್ತದೆ. ಇಂಥ ಹತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದರು.

ತುರ್ವಿಹಾಳ ಪೊಲೀಸ್ ಠಾಣೆ ಪಿಎಸ್‌ಐ ಸುಜಾತಾ ಮಾತನಾಡಿ, ಪ್ರಸ್ತುತ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅಲ್ಲದೆ ಸಂಸ್ಕಾರ, ನೈತಿಕ ಮೌಲ್ಯಗಳ ಕಲಿಸುವ ಅವಶ್ಯಕತೆ ಇದೆ ಎಂದರು. ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕಲಾವತಿ ಎನ್., ಎನ್‌ಎಸ್‌ಜಿ ಕಮಾಂಡೋ ರೇಣುಕಾ, ಉಪನ್ಯಾಸಕಿ ವಿಜಯಲಕ್ಷ್ಮೀ, ಪ್ರಮುಖರಾದ ಸುಜಾತಾ ತುರ್ವಿಹಾಳ, ಮಾನಮ್ಮ ಪೂಜಾರಿ, ಪದ್ಮಾವತಿ ಹಂಪನಾಳ, ಬಸವರಾಜ ಕುಂಬಾರ, ಆರ್.ಜಿ.ದೇಶಪಾಂಡೆ ಇತರರಿದ್ದರು.