ಜಿಲ್ಲೆ

13ರಂದು ಅಂಗಾಗ ದಾನ ದಿನಾಚರಣೆ

reportermng

ಮಂಗಳೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲಾ ಶಾಖೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಅಸೋಸಿಯೇಷನ್ ಆಫ್‌ ಮೆಡಿಕಲ್ ಕನ್ಸಲ್‌ಟೆಂಟ್ಸ್ ಮತ್ತು ಜೀವ ಸಾರ್ಥಕತೆ ಆಶ್ರಯದಲ್ಲಿ ಆ.13ರಂದು ಬೆಳಗ್ಗೆ 9.30ಕ್ಕೆ ನಗರದ ಅತ್ತಾವರದ ಐಎಂಎ ಭವನದಲ್ಲಿ ವಿಶ್ವ ಅಂಗಾಂಗ ದಾನ ದಿನಾಚರಣೆ ನಡೆಯಲಿದೆ ಎಂದು ಭಾರತೀಯ ರೆಡ್‌ಕ್ರಾಸ್ ದ.ಕ.ಜಿಲ್ಲಾ ಶಾಖೆಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.
ರೆಡ್‌ಕ್ರಾಸ್ ಶಾಖೆ ಅಧ್ಯಕ್ಷ, ದ.ಕ.ಜಿಲ್ಲಾಕಾರಿ ಡಾ.ರಾಜೇಂದ್ರ ಕೆ.ವಿ. ಅಧ್ಯಕ್ಷತೆ ವಹಿಸಲಿದ್ದಾರೆ. ನಿಟ್ಟೆ (ಡೀಮ್ಡ್ ಟು ಬಿ ) ವಿಶ್ವ ವಿದ್ಯಾಲಯದ ಸಹಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲಾ ಶಾಖೆಯ ಆರೋಗ್ಯ ಉಪ ಸಮಿತಿ ಪ್ರಕಟಿಸಿರುವ ಅಂಗಾಂಗಗಳ ಮತ್ತು ದೇಹ ದಾನದ ಮಾಹಿತಿ ಕೈ ಪಿಡಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಅಂಗಾಗ ದಾನ ಮಾಡಿದ ಮೂವರು ಅಂಗಾಂಗ ದಾನಿಗಳ ಕುಟುಂಬದವರನ್ನು ಇದೇ ಸಂದರ್ಭ ಸನ್ಮಾನಿಸಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೆಡ್ ಕ್ರಾಸ್ ರೋಗ್ಯ ಉಪ ಸಮಿತಿ ಚೇರ್ಮನ್ ಡಾ.ಬಿ.ಸಚ್ಚಿದಾನಂದ ರೈ ಮಾತನಾಡಿ, ಈಗಾಗಲೇ ಯೂತ್ ರೆಡ್‌ಕ್ರಾಸ್ ವತಿಯಿಂದ 8 ಕಾಲೇಜುಗಳಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗಿದೆ. ಅಂಗಾಂಗ ದಾನ ಮಾಡು ಘೋಷಣಾ ಪತ್ರ ಮುದ್ರಿಸಿ ವಿದ್ಯಾರ್ಥಿ ಸಮುದಾಯಕ್ಕೆ ವಿತರಿಸಲಾಗಿದೆ. ಅಂದು ನಗರದ ಕಟ್ಟಡಗಳಿಗೆ ಗ್ರೀನ್ ಲೈಟ್‌ಗಳನ್ನು ಉರಿಸುವ ಮೂಲಕ ಅಂಗಾಂಗ ದಾನದ ಕುರಿತು ಅರಿವು ಮೂಡಿಸುವ ಕೆಲಸ ಸಾಗಲಿದೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ.ಜಿಲ್ಲಾ ಶಾಖೆಯ ಗೌರವ ಕಾರ‌್ಯದರ್ಶಿ ಕುಸುಮಾಧರ.ಬಿ.ಕೆ. ಆಡಳಿತ ಸಮಿತಿ ನಿರ್ದೇಶಕ ಪಿ.ಬಿ.ಹರಿಪ್ರಸಾದ್ ರೈ ಉಪಸ್ಥಿತರಿದ್ದರು.