RAGHUVEERA NAYAK 
ಜಿಲ್ಲೆ

ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆದ ಆದೇಶ ರದ್ದು

Raichur - Reporter - Rachhai Swamy

ರಾಯಚೂರು ಕಾಡು ಕುರುಬ ಎಂದು ನಕಲಿ ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದ ನಗರ ನಿವಾಸಿ ಕೆ.ಸತ್ಯ ನಾರಾಯಣರ ಪುತ್ರ ಮತ್ತು ಪುತ್ರಿಯಜಾತಿ ಪ್ರಮಾಣ ಪತ್ರವನ್ನು ಸಹಾಯಕ ಆಯುಕ್ತರು ರದ್ದುಗೊಳಿಸಿ ಆದೇಶಿಸಿದ್ದಾರೆ ಎಂದು ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀ ರನಾಯಕ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಮಾತನಾಡಿ, ಕೆ.ಸತ್ಯನಾರಾಯಣ ಎಂಬುವವರು ಅವರ ಪುತ್ರಿ ಸಾಕ್ಷಿ ಮತ್ತು ಸಂಜಯ ಹೆಸರಿನಲ್ಲಿ ಕಾಡು ಕುರುಬ ಜಾತಿಪ್ರಮಾಣಪತ್ರ ಪಡೆದಿರುವ ಕುರಿತು ದೂರು ದಾಖಲಿಸಲಾಗಿತ್ತು. ಉಪ ವಿಭಾಗ ಅಽಕಾರಿಗಳು ಪ್ರಕರಣ ವಿಚಾರಣೆ ನಡೆದಿ ಜಾತಿಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ದ್ದಾರೆ.

ತಂದೆಯ ಜಾತಿಯೇ ಮಕ್ಕಳಿಗೆ ಅನ್ವಯಿಸಲಾಗುತ್ತದೆ ಷರತ್ತಿನ ಮೇಲೆ ನೀಡಲಾಗಿದ್ದ ಜಾತಿ ಪ್ರಮಾಣಪತ್ರಗಳನ್ನು ರದ್ದುಗೊಳಿಸಲಾಗಿದೆ. ಸತ್ಯನಾರಾಯಣ ಇವರ ಪತ್ನಿ ಡಾ.ಕೆ.ಅನಿತಾಕಾಡು ಕುರುಬ ಜಾತಿ ಪ್ರಮಾಣ ಪತ್ರ ಪಡೆದಿದ್ದು ಜಾತಿ ಪರಿಶೀಲನೆಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುವದಾಗಿ ಹೇಳಿದರು.

ಕಂದಾಯ ಇಲಾಖೆ ಅಽಕಾರಿಗಳು ಒತ್ತಡಕ್ಕೆ ಮಣಿದು ಎಸ್‌ಟಿ ಜಾತಿಪ್ರಮಾಣಪತ್ರ ನೀಡಿದ್ದು ಕ್ರಮಕ್ಕೂ ದೂರು ನೀಡುವದಾಗಿ ಹೇಳಿದರು. ಕಾಡು ಕುರುಬು, ಗೊಂಡ ಕುರುಬ ಎಂದು ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ವಂಚಿಸುತ್ತಿರುವ ಕುರಿತು ಸಮಾಜ ನಿರಂತರವಾಗಿ ಹೋರಾಟ ಮಾಡುತ್ತಲೇಬಂದಿದೆ ಎಂದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ, ರಾಮುನಾಯಕ, ರಮೇಶ ನಾಯಕ, ರಾಮಕೃಷ್ಣ ನಾಯಕ ಇದ್ದರು.