ಲೋಕಾಪುರದ ಯುವ ಮುಖಂಡ ಪ್ರಮೋದ ತೆಗ್ಗಿ ಅವರನ್ನು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ ಆದೇಶ ಪತ್ರ ನೀಡಿದರು. ಎಂ. ಚನ್ನಬಸಪ್ಪ, ವೀರಣ್ಣ ಚೌದ್ರಿ, ಲೋಕಣ್ಣ ಉಳ್ಳಾಗಡ್ಡಿ ಇದ್ದರು. 
ಜಿಲ್ಲೆ

ಪ್ರಮೋದ ತೆಗ್ಗಿಗೆ ಆದೇಶ ಪತ್ರ ವಿತರಣೆ

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ಪಟ್ಟಣದ ಯುವ ಮುಖಂಡ ಪ್ರಮೋದ ತೆಗ್ಗಿ ಅವರನ್ನು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ ತಿಳಿಸಿದ್ದಾರೆ.

ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿದ ಅವರು, ತಾವು ಇಂದಿನಿಂದಲೇ ಸಂಘದ ಚಟುವಟಿಕೆಯಲ್ಲಿ ಭಾಗಿಯಾಗಿ ರಾಜ್ಯಾದ್ಯಂತ ಸಂಚರಿಸಿ ಸಂಘ ಕಟ್ಟುವಂತಹ ಕೆಲಸ ಮಾಡಬೇಕು. ಈರುಳ್ಳಿ ಬೆಳೆಗಾರರ ಪರ ಹೋರಾಟದಲ್ಲಿ ಪಾಲ್ಗೊಂಡು ರೈತರ ಹಿತಕ್ಕಾಗಿ, ಅನುಕೂಲಕ್ಕಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.

ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಪ್ರಮೋದ ತೆಗ್ಗಿ ಮಾತನಾಡಿ, ನನಗೆ ವಹಿಸಿಕೊಟ್ಟ ಜವಾಬ್ದಾರಿಯನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಗೌರವಾಧ್ಯಕ್ಷ ಎಂ. ಚನ್ನಬಸಪ್ಪ, ಉಪಾಧ್ಯಕ್ಷ ವೀರಣ್ಣ ಚೌದ್ರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಉಮೇಶ, ಖಜಾಂಜಿ ಶರಣಪ್ಪ ಮೂಲಿಮನಿ, ಬಾಗಲಕೋಟೆ ಜಿಲ್ಲಾ ಈರುಳ್ಳಿ ಬೆಳೆಗಾರರ ಅಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ಇತರರಿದ್ದರು.