ಜಿಲ್ಲೆ

ಸಾರ್ವಜನಿಕ ಉದ್ಯಮ ಖಾಸಗೀಕರಣಕ್ಕೆ ವಿರೋಧ ; ತುಮಕೂರಿನ ಬಿಜಿಎಸ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

Tumakuru

ತುಮಕೂರು : ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ವಿರೋಧಿಸಿ ಸಿಐಟಿಯು, ಸಿಪಿಐಎಂ ಮತ್ತು ಜನಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಸಂಜೆ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್ ಮಾತನಾಡಿ, ಅತ್ಮನಿರ್ಭರದ ಬಗ್ಗೆ ಮಾತನಾಡುವ ಸರ್ಕಾರ, ನೀತಿ ಅಯೋಗದ ಮೂಲಕ 34 ಸಾರ್ವಜನಿಕ ಉದ್ಯಮಗಳನ್ನು ಹಂತ ಹಂತವಾಗಿ ಖಾಸಗೀಕರಣ ಮಾಡಲು ಹೊರಟಿದೆ, ಸಾರ್ವಜನಿಕರ ನಂಬಿಕೆ ಭಾಗವಾಗಿರುವ ಎಲ್‌ಐಸಿಯನ್ನೂ ಖಾಸಗೀಕರಿಣಗೊಳಿಸುತ್ತಿರುವುದು ಖಂಡನೀಯ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಮಾತನಾಡಿ, ದೇಶದ ಸಂಪತ್ತಿಗೆ ಕೊಡುಗೆ ನೀಡಿದ ಸಾರ್ವಜನಿಕ ಉದ್ಯಮಗಳು ನವರತ್ನ ಕಾಮಧೇನು ಎಂಬ ಹೆಸರು ಪಡೆದು ಇತಿಹಾಸ ಸೇರಿರುವಾಗ ಖಾಸಗಿಕರಣ ಮಾಡುತ್ತಿರುವುದು ದೇಶ ವಿರೋಧಿ ಎಂದರು.

ಪ್ರಾಂತ ರೈತ ಸಂಘದ ಬಿ.ಉಮೇಶ್ ಮಾತನಾಡಿ, ದೇಶ ಪ್ರೇಮದ ಹೆಸರಲ್ಲಿ ಜನರಲ್ಲಿ ಅಪ ನಂಬಿಕೆ ಹುಟ್ಟಿಸಿ ಜನಸಮಾನ್ಯರಿಗೆ ತೆರಿಗೆ ಹಾಕಿ, ಖಾಸಗಿ ಕಂಪನಿಗಳಿಗೆ ರತ್ನಕಂಬಳಿ ಹಾಸುವ ಬಿಜೆಪಿಯನ್ನು ಮುಂದಿನ ದಿನಗಳಲ್ಲಿ ತಿರಸ್ಕರಿಸಬೇಕು ಎಂದರು.

ಸಿಐಟಿಯು ಜಿಲ್ಲಾ ಖಜಾಂಚಿ ಎ.ಲೋಕೆಶ್, ತಾಲೂಕು ಅಧ್ಯಕಷ ಷಣ್ಮುಕಪ್ಪ, ಜೀವ ವಿಮಾ ನೌಕರರ ಸಂಘಟನೆಯ ಸದಾಶಿವ, ಸ್ನೇಹಲತಾ, ಮಧು , ಕರ್ನ್ ಲಿಬರ್ಸ್‌ ಕಾರ್ಮಿಕ ಸಂಘದ ಶಿವಕುಮಾರ್‌ಸ್ವಾಮಿ, ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಜ್ಜಪ್ಪ, ತುಮಕೂರು ಪೌರ ಕಾರ್ಮಿಕರ ಸಂಘದ ನಾಗರಾಜು, ಪುಟ್ಪಾತ್ ವ್ಯಾಪಾರಿಗಳ ಸಂಘದ ಮುತ್ತುರಾಜು, ವಾಸೀಂ, ಅಸ್ಪತ್ರೆ ಕಾರ್ಮಿಕರ ಸಂಘದ ರಂಗಮ್ಮ, ಫೀಟ್ ವೇಲ್ ಕಾರ್ಮಿಕರ ಸಂಘದ ಸುಜಿತ್ ನಾಯಕ್, ಅಟೋಚಾಲಕರ ಸಂಘದ ಸಿದ್ದರಾಜು, ಕಾಫಿ ಕಾರ್ಮಿಕರ ಸಂಘದ ಅಂಜುಮ್ ಮತ್ತಿತರರು ಇದ್ದರು.