ಕೋಟ: ಇಲ್ಲಿನ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಲಾಡಿ ಹೊಳೆಯಲ್ಲಿ ಪಂಚಾಯಿತಿ, ಗಣಿ ಇಲಾಖೆ ಅನುಮತಿ ಪಡೆದು ಮರಳುಗಾರಿಕೆ ನಡೆಸುತ್ತಿರುವ ವಿರುದ್ಧ ಸ್ಥಳೀಯ ಗ್ರಾಮಸ್ಥರು ಶುಕ್ರವಾರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಗ್ರಾಮದ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕಾರಣದಿಂದ ಮರಳುಗಾರಿಕೆ ನಡೆಸುತ್ತಿರದ್ದವರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾಮಸ್ಥರ ನಡೆಯನ್ನು ಪರವಾನಿ ಪಡೆದ ದಯಾಕರ್ ಖಂಡಿಸಿದ್ದಾರೆ.