ಜಿಲ್ಲೆ

ಬೆಳಸೆಯಲ್ಲಿ ಬಂದೀಖಾನೆ ನಿರ್ವಣಕ್ಕೆ ವಿರೋಧ

ಸುಭಾಸ ಹೆಗಡೆ ಧೂಪದಹೊಂಡ


ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಮಾಳ ಜಮೀನಿನಲ್ಲಿ ಜಿಲ್ಲಾ ಬಂದೀಖಾನೆ (ಜೈಲು) ನಿರ್ಮಾಣ ವಿರೋಧಿಸಿ ಹಿಚ್ಕಡ, ಕಣಗಿಲ್, ಬೆಳಸೆ ಚಂದಮಠ, ಶಿರೂರು ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ರಮಾನಂದ ಬಿ. ನಾಯಕ ಮಾತನಾಡಿ, ಬೆಳಸೆ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.119, 120, 121, 122 ಹಾಗೂ 123 ಕ್ಷೇತ್ರದ ಗೋಮಾಳ ಜಾಗದಲ್ಲಿ ಜಿಲ್ಲಾ ಬಂದೀಖಾನೆ ನಿರ್ವಿುಸಲು ನಮ್ಮ ವಿರೋಧ ಇದೆ. ಈ ಭಾಗದಲ್ಲಿ ಈಗಾಗಲೇ ಕಿತ್ತೂರು ಚನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆ ಪ್ರಾರಂಭವಾಗಿದೆ. ಈಗ ಮುರಾರ್ಜಿ ದೇಸಾಯಿ ಗಂಡು ಮಕ್ಕಳ ವಸತಿ ಶಾಲೆ ನಿರ್ವಣದ ಕಾಮಗಾರಿ ನಡೆಯುತ್ತಿದೆ. ಪಕ್ಕದಲ್ಲೇ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ)ಕ್ಕೆ ಸ್ಥಳವನ್ನು ನಿಯೋಜನೆ ಮಾಡಿದ್ದಾರೆ. ಹೀಗಾಗಿ ಇಲ್ಲಿ ಬಂದೀಖಾನೆ ನಿರ್ವಿುಸಬಾರದು ಎಂದರು.
ಶಂಕರ ಗೌಡ ಮಾತನಾಡಿ, ಗಂಗಾವಳಿ ನದಿ ಹರಿಯುತ್ತಿದ್ದು, ಪ್ರವಾಹ ಬಂದಾಗ ನೂರಾರು ಕುಟುಂಬಗಳು ನಿರಾಶ್ರಿತವಾಗುತ್ತವೆ. ಅವರ ಪುನರ್ವಸತಿಗೆ ಈ ಸ್ಥಳ ನೀಡುವುದನ್ನು ಬಿಟ್ಟು ಬಂದೀಖಾನೆ ನಿರ್ವಣಕ್ಕೆ ಈ ಸ್ಥಳ ನೀಡಿರುವುದು ಸೂಕ್ತವಲ್ಲ ಎಂದರು.
ತಹಸೀಲ್ದಾರ್ ಉದಯ ಕುಂಬಾರ ಮನವಿ ಸ್ವೀಕರಿಸಿದರು. ರಾಮದಾಸ ಆರ್. ನಾಯಕ, ರಾಘವೇಂದ್ರ ಆರ್. ನಾಯಕ, ಕೌಸ್ತುಭ ಟಿ. ನಾಯಕ, ರಮೇಶ ಗೌಡ, ವಿಜಯ ಎನ್. ಗುನಗಾ, ಹೊನ್ನಯ್ಯ ನಾಯಕ, ಪುರುಷೋತ್ತಮ ಡಿ. ನಾಯ್ಕ, ವಿ.ಎಚ್. ನಾಯಕ, ಬಿಂದೇಶ ನಾಯಕ ಹಿಚ್ಕಡ, ಗೋಪಾಲ ನಾಯಕ ಇತರರಿದ್ದರು.