ಜಿಲ್ಲೆ

ಕೊರಗಜ್ಜ ದೈವದ ಸನ್ನಿವೇಶಕ್ಕೆ ವಿರೋಧ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಲ್ಜಿಗ ತುಳು ಸಿನೆಮಾದಲ್ಲಿ ಕೊರಗಜ್ಜ ದೈವದ ಸನ್ನಿವೇಶ ವಿನಾಕಾರಣ ತೋರಿಸಲಾಗಿದ್ದು, ಇದಕ್ಕೆ ವಿರೋಧವಿದೆ. ಚಿತ್ರದಲ್ಲಿ ಆ ಭಾಗಕ್ಕೆ ಕತ್ತರಿ ಹಾಕಿ ಪ್ರದರ್ಶಿಸಬೇಕು ಎಂದು ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ ಮುಖ್ಯಸ್ಥೆ ಸಹನಾ ಸೂಡ ಹಾಗು ದಿಲ್​ ರಾಜ್​ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ದೈವರಾಧನೆಯ ಕಟ್ಟು ಕಟ್ಟಳೆಗಳಿಗೆ ಚ್ಯುತಿ ಬಂದಾಗ ವಿರೋಧಿಸುವುದು ಸಹಜ. ನಾವೆಂದಿಗೂ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ಯಾರನ್ನು ವಿರೋಧಿಸುವುದಿಲ್ಲ. ವ್ಯಕ್ತಿಗತವಾಗಿ ಟೀಕಿಸುವುದಿಲ್ಲ. ಕಲ್ಜಿಗ ಚಿತ್ರದಲ್ಲಿ ಕೊರಗಜ್ಜ ಸನ್ನಿವೇಶದ ಅಗತ್ಯತೆ ಏನಿತ್ತು ಎಂಬುದರ ಬಗ್ಗೆ ನಿಮಾರ್ಪಕರು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

2012 ರಲ್ಲಿ ದ.ಕ ಜಿಲ್ಲಾಧಿಕಾರಿ ದೈವರಾಧನೆಯನ್ನು ಸಾಂಸತಿಕ ಚಟುವಟಿಕೆಯಾಗಿ ತೋರಿಸುವುದನ್ನು ನಿಷೇಧಿಸಿ, ಸುತ್ತೋಲೆ ಹೊರಡಿಸಿದ್ದರು. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಧಿಕಾರಿಗಳಿಗೆ ಆದೇಶಿಸಬೇಕೆಂದು ದ.ಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದವರು ತಿಳಿಸಿದರು. ಸಂಟನೆ ಪ್ರಮುಖರಾದ ಭರತ್​ ಬಳ್ಳಾಲ್​ ಭಾಗ್​, ಗಿರೀಶ್​, ಪ್ರಿಯಾಂಕ ಉಪಸ್ಥಿತರಿದ್ದರು.