ಜಿಲ್ಲೆ

ಒಳ ಮೀಸಲಿಗೆ ಲಂಬಾಣಿಗರ ವಿರೋಧ

Chitradurga

ಚಿತ್ರದುರ್ಗ:  ಒಳಮೀಸಲು ಜಾರಿ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಆಲ್ ಇಂಡಿಯಾ ಬಂಜಾರ ಸೇವಾ ಸಂಘ ನೇತೃತ್ವದಲ್ಲಿ ನಗರದ ಚಳ್ಳಕೆರೆ ಗೇಟ್ ಬಳಿ ಭಾನುವಾರ ಪ್ರತಿಭಟನೆ ನಡೆಯಿತು.

ರಾಜ್ಯ ಬಿಜೆಪಿ ಸರ್ಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಹಾಗೂ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಮುಖಂಡರು ಎಚ್ಚರಿಸಿದರು.

ಪ್ರತಿಭಟನೆಗೂ ಮುನ್ನ ನಗರದ ಜಿಲ್ಲಾ ಬಂಜಾರ ಭವನದಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಕಾರ‌್ಯಾಧ್ಯಕ್ಷ ಡಿ.ರಾಮನಾಯ್ಕ, ರಾಜ್ಯ ಯುವ ಘಟಕದ ಅಧ್ಯಕ್ಷ ವಿಜಯ್ ಜಾದವ್, ಮಹಿಳಾ ಘಟಕದ ಅಧ್ಯಕ್ಷೆ ಶೈಲಾಬಾಯಿ, ಸಂಘದ

ಜಿಲ್ಲಾಧ್ಯಕ್ಷ ವಸಂತನಾಯ್ಕ, ಕಾರ‌್ಯಾಧ್ಯಕ್ಷ ಟಿ.ಉಮೇಶ್‌ನಾಯ್ಕ, ಕೃಷ್ಣನಾಯ್ಕ, ರಮೇಶ್ ರಾಮಾವತ್ ವೀಣಾ, ಎನ್.ಪರಮೇಶ್‌ನಾಯ್ಕ, ರಂಗಸ್ವಾಮಿ, ರಾಜನಾಯ್ಕ, ಮಾಧವನಾಯ್ಕ, ಹಾಲ್ಯನಾಯ್ಕ, ಅನಂತಮೂರ್ತಿ ನಾಯ್ಕ, ಸುರೇಶ್‌ನಾಯ್ಕ, ಕುಮಾರ್‌ನಾಯ್ಕ, ಚಂದ್ರನಾಯ್ಕ, ಅನಿಲ್ ಕುಮಾರ್, ಪ್ರಕಾಶ್‌ರಾಮನಾಯ್ಕ ಇದ್ದರು.