ಇಂಡಿ ತಾಲೂಕಿನ ಗೊರನಾಳ ಗ್ರಾಮದ ಮುಖ್ಯಶಿಕನ ಮೇಲೆ ಹಲ್ಲೆ ವಿರೋಧಿಸಿ ಪ್ರಾಥಮಿಕ ಶಾಲಾ ಶಿಕರ ಸಂದಿಂದ ಪಿಎಸ್​ಐ ಮಂಜುನಾಥ ಹಲುಕಂದ ಅವರಿಗೆ ಮನವಿ ಸಲ್ಲಿಸಲಾಯಿತು. ವೈ.ಟಿ.ಪಾಟೀಲ, ಜಯರಾಮ ಚವ್ಹಾಣ, ಅಲ್ಲಾಬ ವಾಲಿಕಾರ, ಎಸ್​.ವಿ.ಹರಳಯ್ಯ ಇತರರಿದ್ದರು. 
ಜಿಲ್ಲೆ

ಮುಖ್ಯಶಿಕ್ಷಕನ ಮೇಲೆ ಹಲ್ಲೆಗೆ ವಿರೋಧ

ಗಿರೀಶ ಸಗರ

ಇಂಡಿ: ಕರ್ತವ್ಯ ನಿರತ ಮುಖ್ಯ ಶಿಕನ ಮೇಲೆ ಗುರುವಾರ ತಾಲೂಕಿನ ಗೊರನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲ್ಲೆ ಮಾಡಲಾಗಿದೆ.

ವರ್ಗಾವಣೆ ಪ್ರಮಾಣದಲ್ಲಿ ಗಂಡು ಎಂದು ನಮೂದಿಸುವ ಬದಲಾಗಿ ಹೆಣ್ಣು ಎಂದು ತಪ್ಪಾಗಿದ್ದರಿಂದ ಮುಖ್ಯಶಿಕನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ.

ಮಾರ ರಾವುತರಾಯ ಪರಸಪ್ಪ ನಾಗಠಾಣ ಎಂಬ ವಿದ್ಯಾರ್ಥಿಗೆ 9ನೇ ತರಗತಿ ಪ್ರವೇಶಕ್ಕಾಗಿ ನೀಡಬೇಕಾಗಿದ್ದ ವರ್ಗಾವಣೆ ಪತ್ರದಲ್ಲಿ ಲಿಂಗ ಕಾಲಂನಲ್ಲಿ ಗಂಡು ಬದಲಾಗಿ ಹೆಣ್ಣು ಎಂದು ಬರೆಯಲಾಗಿತ್ತು.

ಈ ಲೋಪವಾಗಿದ್ದನ್ನು ತಿದ್ದುಪಡಿ ಮಾಡಿ ಗುರುವಾರ ಸರಿಪಡಿಸಿ ನೀಡಲಾಗಿದೆ. ಆದರೂ ವಿದ್ಯಾರ್ಥಿಗೆ ಯಾವುದೇ ಸಂಬಂಧವಿಲ್ಲದ ಅರ್ಜುನ ಖೇಡ ಹಾಗೂ ಸುಧಾಕರ ಜಟ್ಟೆಪ್ಪ ಪೂಜಾರಿ ಎಂಬುವವರು ಮುಖ್ಯ ಶಿಕರನ್ನು ನಿಂದಿಸಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿಬೆದರಿಕೆ ಒಡ್ಡಿದ್ದಾರೆ ಎಂದು ಮುಖ್ಯಶಿಕ ಮಲ್ಲೇಶಿ ಪಿ.ಚಿಮ್ಮಾಗೋಳ ಅವರು ಇಂಡಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.

ಕರ್ತವ್ಯ ನಿರತ ಮುಖ್ಯ ಶಿಕರ ಮೇಲೆ ಹಲ್ಲೆ ಮಾಡಿದ್ದನ್ನು ವಿರೋಧಿಸಿ ಗ್ರಾಮೀಣ ಪೊಲೀಸ್​ ಠಾಣೆ ಪಿಎಸ್​ಐ ಮಂಜುನಾಥ ಹಲುಕಂದ ಅವರಿಗೆ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕರ ಸಂ ಹಾಗೂ ರಾಜ್ಯ ಸರ್ಕಾರಿ ನೌಕರ ಸಂದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಪ್ರಾಥಮಿಕ ಶಾಲಾ ಶಿಕರ ಸಂದ ಅಧ್ಯ ವೈ.ಟಿ.ಪಾಟೀಲ ಮಾತನಾಡಿ, ಮುಖ್ಯಶಿಕ ಎಂ.ಪಿ. ಚಿಮ್ಮಾಗೋಳ ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿ-ಸಬೇಕು. ಶಾಲಾ ಅವಧಿಯಲ್ಲಿ ಶಿಕರ ಮೇಲೆ ಪದೇ ಪದೆ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದಕ್ಕಾಗಿ ಸುರತವಾಗಿ ಮಕ್ಕಳಿಗೆ ಪಾಠ ಮಾಡಲು ಅವಕಾಶ ನೀಡಬೇಕು. ಪೊಲೀಸ್​ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಶಾಲಾ ಶಿಕ ಸಂದ ಪದಾಧಿಕಾರಿಗಳಾದ ಜಯರಾಮ ಚವ್ಹಾಣ, ಅಲ್ಲಾಬ ವಾಲಿಕಾರ, ಎಸ್​.ವಿ.ಹರಳಯ್ಯ, ರಾಮಸಿಂಗ ಕನ್ನೊಳ್ಳಿ, ಹುಚ್ಚಪ್ಪ ತಳವಾರ ಇತರರಿದ್ದರು.