ಜಿಲ್ಲೆ

ಸ್ವ ಉದ್ಯೋಗ ಪ್ರಾರಂಭಿಸಲು ಅವಕಾಶ: ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅರ್ಜಿ ಆಹ್ವಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಡಿ ಗ್ರಾಮೀಣ/ನಗರ ಪ್ರದೇಶದ ಯುವಕ/ ಯುವತಿಯರು ಸ್ವ ಉದ್ಯೋಗ ಪ್ರಾರಂಭಿಸಲು ಉತ್ಪಾದನಾ/ ಸೇವಾ ಚಟುವಟಿಕೆ ಘಟಕಗಳನ್ನ ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.

ಉತ್ಪಾದನಾ ಚಟುವಟಿಕೆಗೆ ಗರಿಷ್ಟ 50 ಲಕ್ಷ ರೂ ಹಾಗೂ ಸೇವಾ ಚಟುವಟಿಕೆ ಗರಿಷ್ಟ 20 ಲಕ್ಷ ರೂ ಸಾಲವನ್ನು ಬ್ಯಾಂಕ್‌ಗಳ ಮೂಲಕ ವಿತರಿಸಲಾಗುವುದು. ಗ್ರಾಮೀಣ ಪ್ರದೇಶದ ಘಟಕಗಳಿಗೆ ಶೇ.35 ಹಾಗೂ ನಗರ ಪ್ರದೇಶದ ಘಟಕಗಳಿಗೆ ಶೇ.25 ರ ಸಹಾಯಧನವನ್ನು ವಿತರಿಸಲಾಗುವುದು. ಮಾಹಿತಿಗೆ ಸುಭಾಷ್‌ನಗರದಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.