ಜಿಲ್ಲೆ

ಗ್ರಾಮಒನ್ ಕೇಂದ್ರ ಪ್ರಾರಂಭಿಸಲು ಅವಕಾಶ: ಏ.15ರೊಳಗೆ ಅರ್ಜಿ ಸಲ್ಲಿಸಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಸೇವಾ ಸಿಂಧು ಯೋಜನೆಯಡಿ ರೂಪಿಸಲಾದ ’ಗ್ರಾಮ ಒನ್’ ಕೇಂದ್ರ ಪ್ರಾರಂಭಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿಗೆ ಆನ್‌ಲೈನ್ https://kal&mys.gramaone.karnataka.gov.in/index.php/applicant&registration&initial&step ಲಿಂಕಿನ ಮೂಲಕ ಏ.15ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ