ಜಿಲ್ಲೆ

ಪ್ರತಿಭೆ ಅನಾವರಣಕ್ಕೆ ಅವಕಾಶ ಅಗತ್ಯ

Avinash R

ಉಳ್ಳಾಲ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು ಅಗತ್ಯ ಎಂದು ಇಲ್ಯಾಸ್ ಜುಮಾ ಮಸೀದಿಯ ಖತೀಬ್ ಇಸಾಕ್ ಸಖಾಫಿ ನಂದಾವರ ಹೇಳಿದರು.

ಮಂಜನಾಡಿ ಗ್ರಾಮದ ಕಲ್ಕಟ್ಟ ರಿಫಾಯಿಯ್ಯ ಮದ್ರಸಾ ಮತ್ತು ಇಲ್ಯಾಸ್ ಜುಮಾ ಮಸೀದಿಯ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಇತ್ತೀಚೆಗೆ ನಡೆದ ರಿಫಾಯಿಯ್ಯ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಉದ್ಘಾಟಿಸಿ ಮಾತನಾಡಿದರು.

ಮಸೀದಿ ಅಧ್ಯಕ್ಷ ಮನ್ಸೂರ್ ನಾಟೆಕಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಶ್ರಫ್ ಕಟ್ಟೆ, ಕುಂಞಿಬಾವ ಕಂಡಿಕ, ಕಾರ್ಯದರ್ಶಿ ಹಸೈನಾರ್, ರಝಾಕ್ ಕಂಡಿಕ, ಗೌರವಾಧ್ಯಕ್ಷ ಪೊಡಿಯಬ್ಬ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮಹಮ್ಮದ್ ಮಾಸ್ಟರ್ ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ರಝ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮೋನು ಕಲ್ಕಟ್ಟ ವಂದಿಸಿದರು. ಶರೀಫ್ ಸಅದಿ, ಮುಅಲ್ಲಿಂ ಇಸ್ಹಾಕ್ ಸಅದಿ, ರಝಾಕ್ ಸಅದಿ ಹಾಗೂ ಹಸನ್ ಸಅದಿ ಕಾರ್ಯಕ್ರಮ ನಿರ್ವಹಿಸಿದರು.