ಜಿಲ್ಲೆ

ಸೇವಾ ಮನೋಭಾವ ಉಳ್ಳವರಿಗೆ ಅವಕಾಶ

ಕುಣಿಗಲ್​: ಮುತ್ತುಗಳಂತೆ ಮೌಲ್ಯವುಳ್ಳ ಸದಸ್ಯರನ್ನು ರೋಟರಿಗೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವರಿಗೆ ಕ್ಲಬ್​ನ ಮಹತ್ವ ತಿಳಿದಿರಬೇಕು. ಆಂತಹವರು ಸಾರ್ವಜನಿಕ ೇತ್ರದಲ್ಲಿ ಸೇವೆ ಸಲ್ಲಿಸಲು ಸಾಧ್ಯಎಂದು ರೋಟರಿಯ ಮೆಂಟರ್​ ಮೆಂಬರ್​ಷಿಪ್​ ಡೆವಲಪ್ಮೆಂಟ್​ ಪಿಡಿಜಿ ವಿ.ಶ್ರೀನಿವಾಸ್​ಮೂರ್ತಿ ತಿಳಿಸಿದರು.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರೋಟರಿ ಕ್ಲಬ್​ ಆ್​ ನರ್ತನ ಪುರಿ ವತಿಯಿಂದ ಹಮ್ಮಿಕೊಂಡಿದ್ದ ಜೋನ್​ "ಎ್​' ರ ನೂತನ ಸದಸ್ಯರ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ರೋಟರಿ ಕ್ಲಬ್​ ಸದಸ್ಯರಾಗುವವರಿಗೆ ವ್ಯಕ್ತಿತ್ವ ವಿಕಾಸ, ಸುಸಂಸತ ಮತ್ತು ಸಾಮಾಜಿಕ ಸೇವೆಯನ್ನು ಕಲಿಸುತ್ತದೆ. ಸದಸ್ಯರಾಗುವವರು ಸಭೆಗೆ ಹಾಜರಾಗಿ ಕಾಫಿ ಕುಡಿದು, ಶುಲ್ಕ ಕಟ್ಟಿ ಹೋಗಹುವ ಕೆಲಸವಲ್ಲ. ಕ್ಲಬ್​ನ ಮಹತ್ವ, ಉದ್ದೇಶ ಅರಿಯಬೇಕು. ಜನ ಸೇವೆಗೆ ಒತ್ತು ನೀಡಬೇಕು ಎಂದರು.

ಉತ್ತಮ ಸೇವೆ : 85 ವರ್ಷವಾಗಿದ್ದರೂ ಬಿ.ಎಂ.ಹುಚ್ಚೇಗೌಡ ಅವರು ರೋಟರಿ ಕ್ಲಬ್​ ಆ್​ ನರ್ತನಪುರಿ ಅಧ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.ಅವರ ಸಮಾಜ ಮುಖಿ ಕೆಲಸ ಗುರುತಿಸಿ ಡೆನಾಮಿಂಕ್​ ಅಧ್ಯ ಎಂಬ ಬಿರುದು ನೀಡಿ ಸನ್ಮಾನಿಸಲಾಗುತ್ತಿದೆ ಎಂದರು.

ರೋಟರಿ ತರಬೇತುದಾರ ಡಿ.ಎಲ್​.ವಿ.ಶರ್ಮ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ರೋಟರಿ ಕ್ಲಬ್​ ಇದ್ದು, 3500 ಸದಸ್ಯರಿದ್ದಾರೆ. ಹೊಸದಾಗಿ 35 ಕ್ಲಬ್​ ಹಾಗೂ ಒಂದೂವರೆ ಸಾವಿರ ಹೊಸ ಸದಸ್ಯರು ಸೇರಿದಂತೆ ಐದು ಸಾವಿರ ಸದಸ್ಯರನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು. ಮೆಂಬರ್ಶಿಪ್​ ಡೆವಲಪಮೆಂಟ್​ ಛೇರ್ಮನ್​ ಬಿ.ಎಸ್​.ವಿನೋದ್​ಕುಮಾರ್​, ರೋಟರಿ ಕ್ಲಬ್​ ಆ್​ ನರ್ತನಪುರಿ ಅಧ್ಯ ಎಂ.ಎಲ್​.ಪ್ರಕಾಶ್​,ಕಾನ್ಫರೆನ್ಸ್​ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್​, ಜಿಲ್ಲಾ ಕಾರ್ಯದರ್ಶಿ ಎಂ.ಎಸ್​.ಉಮೇಶ್​, ನರ್ತನಪುರಿ ಕಾರ್ಯದರ್ಶಿ ಟಿ.ಸಿ.ಗಂಗಾಧರ್​, ಸಂಸ್ಥಾಪಕ ರವಿಕುಮಾರ್​, ಸದಸ್ಯರಾದ ಸಂತೋಷ್​, ಕೋರ್ಟ್​ ಗೋಪಾಲ್​ ಇತರರು ಇದ್ದರು.