ಜಿಲ್ಲೆ

ಪ್ರತಿ ಶೈಕ್ಷಣಿಕ ವರ್ಷದಲ್ಲೂ ಬೆಳವಣಿಗೆಗೆ ಅವಕಾಶ

ಇಂದಿರಾ ಎನ್ ಕೆ

ಕುಂದಾಪುರ: ಪ್ರತಿ ಶೈಕ್ಷಣಿಕ ವರ್ಷದಲ್ಲೂ ಬೆಳೆಯಲು, ಕಲಿಯಲು ಹೊಸ ಹೊಸ ಅವಕಾಶಗಳಿರುತ್ತವೆ ಎಂದು ಕುಂದಾಪುರ ಭಾಗ್ಯವಂತೆ ರೋಜರಿ ವಾತಾ ಚರ್ಚ್ ಧರ್ಮಗುರು ಪಾವ್ಲ್ ರೇಗೊ ಹೇಳಿದರು.

ಕುಂದಾಪುರ ಸೇಂಟ್ ಮೇರೀಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತೋತ್ಸವ ಹಾಗೂ ಶಿಕ್ಷಕರಕ್ಷಕ ಸಭೆ ಉದ್ಘಾಟಿಸಿ ವಾತನಾಡಿದರು.

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ವಿದ್ಯಾರ್ಥಿ ಸಲಹೆಗಾರ ಜೀವನ್ ಲುವಿಸ್ ಶುಭಾಶಂಸನೆ ಮಾಡಿದರು. ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನೂತನವಾಗಿ ನೇಮಕಗೊಂಡ ಅಧ್ಯಾಪಕರನ್ನು ಸ್ವಾಗತಿಸಲಾಯಿತು. ಅಧ್ಯಾಪಕ ವಸಂತ ಶೆಟ್ಟಿ ಎಂ., ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲೆ ರೇಷ್ಮಾ ರ್ನಾಂಡಿಸ್ ಪ್ರಾಸ್ತಾವಿಕವಾಗಿ ವಾತನಾಡಿದರು. ಅಧ್ಯಾಪಕಿ ಬಿನು ಜಯಚಂದ್ರನ್ ವಂದಿಸಿದರು. ಪ್ರೀತಿ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.