ಜಿಲ್ಲೆ

ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರ

ಯಲಬುರ್ಗಾ: ಪ್ರತಿಯೊಬ್ಬರೂ ಧಾರ್ಮಿಕ ಹಾಗೂ ದೈವಭಕ್ತಿ ಬೆಳೆಸಿಕೊಂಡಾಗ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಲಿದೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ಮೈಸೂರು ಮಠದ ಲಿಂ.ಗುರು ಮಹಾಂತ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಶರಣ ಚರಿತಾಮೃತ ಪುರಾಣ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು.

ನಾಡಿಗೆ ವೀರಶೈವ ಲಿಂಗಾಯತ ಮಠ ಮಂದಿರಗಳು ದಾಸೋಹ, ಶಿಕ್ಷಣ, ಉತ್ತಮ ಸಂಸ್ಕಾರ ನೀಡಿ ತನ್ನದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿವೆ. ಅದರಲ್ಲಿ ಮೈಸೂರು ಮಠವೂ ಒಂದು. ಪೂಜ್ಯ ವಿಜಯಮಹಾಂತ ಸ್ವಾಮೀಜಿ ಅವರ ಅಪಾರ ಪಾಂಡಿತ್ಯ ಪಡೆದಿದ್ದಾರೆ. ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.

ಹಿರೇಮ್ಯಾಗೇರಿಯಲ್ಲಿ 11 ದಿನ ಪ್ರವಚನ ನಡೆಸಿ ಭಕ್ತರಿಗೆ ಉತ್ತಮ ಸಂದೇಶ ನೀಡಲಾಗಿದೆ. ಅಲ್ಲದೆ ಸಾಮೂಹಿಕ ವಿವಾಹ ಹಮ್ಮಿಕೊಂಡು ಬಡವರಿಗೆ ಆರ್ಥಿಕ ಹೊರೆ ಇಳಿಸುವ ಪುಣ್ಯದ ಕಾರ್ಯ ಮಾಡಲಾಗಿದೆ. ಪ್ರತಿದಿನ ಸ್ವಯಂ ಪ್ರೇರಿತರಾಗಿ ಭಕ್ತರು ಕಾರ್ಯಕ್ರಮದ ಯಶಸ್ಸಿನಗೆ ಕೈ ಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕುದರಿಮೋತಿ ಮೈಸೂರ ಮಠದ ವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಎಲ್ಲರೂ ಒಂದಾಗಿ ಸಮಾಜದಲ್ಲಿ ಬದುಕಬೇಕು ಎನ್ನುವ ಸಿದ್ಧಾಂತ ಬರಬೇಕು. ಭಕ್ತರ ಉದ್ಧಾರಕ್ಕಾಗಿ ಮಠಮಾನ್ಯಗಳ ಕೊಡುಗೆ ಅಪಾರವಿದೆ ಎಂದರು.

ಮೈನಳ್ಳಿಯ ಸಿದ್ಧೇಶ್ವರ ಸ್ವಾಮೀಜಿ, ಖಿದ್ಮಾ ಫೌಂಡೇಷನ್ ಅಧ್ಯಕ್ಷ ಅಮೀರ್ ಅಶರೀ ಬನ್ನೂರು, ಇಟಗಿ-ಚಿಕ್ಕಮ್ಯಾಗೇರಿಯ ಭೂ ಕೈಲಾಸ ಮೇಲುಗದ್ದುಗೆ ಹಿರೇಮಠದ ಡಾ.ಗುರುಶಾಂತವೀರ ಸ್ವಾಮೀಜಿ, ಪುರ್ತಗೇರಿಯ ಕೈಲಾಸಲಿಂಗ ಸ್ವಾಮೀಜಿ, ಘಟಪ್ರಭ ವಿರಕ್ತಮಠದ ಶಿವಕುಮಾರ ದೇವರು, ಹುಣಸಿಹಾಳ ಶಾಂತವೀರ ಸ್ವಾಮೀಜಿ, ಯುವ ಮುಖಂಡ ಮಹಾಂತೇಶ ಗಾಣಿಗೇರ ಮಾತನಾಡಿದರು.

ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಹುಣಸಿಹಾಳ ಶಾಂತವೀರ ಸ್ವಾಮೀಜಿ, ಗಾಯಕ ಶರಣಬಸವ ಕುಮಾರಸ್ವಾಮಿ, ತಬಲಾ ವಾದಕ ಪಂಚಾಕ್ಷರಿ, ಗ್ರಾಪಂ ಅಧ್ಯಕ್ಷ ಕಳಕಪ್ಪ ವೀರಾಪುರ, ಪ್ರಮುಖರಾದ ಶಿವಕುಮಾರ ಕಾಡಣ್ಣವರ, ಜಾಲಾರಸಾಬ, ಕರಿಸಿದ್ಧೇಶ್ವರ ಸೇವಾ ಸಮಿತಿ ಪದ್ಮನಾರಾಯಣ ಮುತುರಾ, ಶರಣಪ್ಪ ಗಾಣಿಗೇರ, ಶರಣಪ್ಪ ಲಿಗಾಡಿ, ಶರಣಪ್ಪ ಅಣ್ಣಿಗೇರಿ, ಗುರಪ್ಪ ಗುರಿಕಾರ, ಪಿಡಿಒ ರತ್ನಮ್ಮ ಇತರರಿದ್ದರು.