ಹುಣಸೂರು: ಡೀಡ್ ಸಂಸ್ಥೆ, ಸದೃಢ ಚಾರಿಟಬಲ್ ಟ್ರಸ್ಟ್ ಹಾಗೂ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 75ಕ್ಕೂ ಹೆಚ್ಚು ಜನರು ತಪಾಸಣೆಗೊಳಗಾದರೆ, 41 ಜನರನ್ನು ಶಸಚಿಕಿತ್ಸೆಗಾಗಿ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ವೇಳೆ ಮಾತನಾಡಿದ ಸದೃಢ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ಮಂಜುನಾಥ್, ಪ್ರತಿ ತಿಂಗಳ ಎರಡನೇ ಬುಧವಾರ ಡೀಡ್ ಸಂಸ್ಥೆ ಆವರಣದಲ್ಲಿ ಶಿಬಿರ ಆಯೋಜಿಸಲಾಗುತ್ತಿದೆ. ನುರಿತ ಕಣ್ಣಿನ ತಜ್ಞ ವೈದ್ಯರು ಪರೀಕ್ಷೆ ನಡೆಸಿ ಅಗತ್ಯವಿದ್ದವರಿಗೆ ಉಚಿತವಾಗಿ ಶಸಚಿಕಿತ್ಸೆ ಮಾಡಿಕೊಡಲಾಗುತ್ತಿದೆ. ಕಳೆದ ಶಿಬಿರದಲ್ಲಿ ಚಿಕಿತ್ಸೆಗೊಳಗಾದವರ ಪೈಕಿ 58 ಜನರಿಗೆ ಇದೀಗ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. ದೇಹದ ಬಹುಮುಖ್ಯ ಅಂಗವಾಗಿರುವ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಆಸಕ್ತಿ ವಹಿಸಬೇಕು ಎಂದರು.
ಸಮುದಾಯ ಯೋಜನೆಯ ಸಂಯೋಜಕ ಶ್ರೀಕಂಠಮೂರ್ತಿ, ಡಾ.ನಿಾ, ಸದೃಢ ಟ್ರಸ್ಟ್‌ನ ಮೋಹನ್‌ಕುಮಾರ್, ಉಷಾ, ಡೀಡ್ ಸಂಸ್ಥೆಯ ಶಾರದಾ ವಳಗೆರೆ , ಪ್ರಕಾಶ್, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಹಾಗೂ ಸಾರ್ವಜನಿಕರು ಇದ್ದರು.