ವಿಜಯಪುರ ನಗರದ ಛತ್ರಪತಿ ಶಿವಾಜಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈರಣ್ಣಾ ಪಟ್ಟಣಶೆಟ್ಟಿ, ಜಗದೀಶ ಮುಚ್ಚಂಡಿ, ಸತೀಶ್ ಪಾಟೀಲ ಮತ್ತಿತರರಿದ್ದಾರೆ.  
ಜಿಲ್ಲೆ

ಆಪರೇಷನ್ ಸಿಂದೂರ ಯಶಸ್ವಿ, ಶಿವಾಜಿ ವೃತ್ತದಲ್ಲಿ ಸಂಭ್ರಮಾಚರಣೆ

Vijyapura - Parsuram Bhasagi

ವಿಜಯಪುರ: ಆಪರೇಷನ್ ಸಿಂದೂರ ಹೆಸರಿನಲ್ಲಿ ಪಾಪಿ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆಯಲ್ಲದೇ ಎಲ್ಲೆಡೆ ವಿಜಯೋತ್ಸವ ಹಾಗೂ ಸಂಭ್ರಮಾಚರಿಸಲಾಯಿತು.

ನಗರದ ಶಿವಾಜಿ ವೃತ್ತದಲ್ಲಿ ಬುಧವಾರ ವಿವಿಧ ಸಂಘಟನೆಗಳ ಪ್ರಮುಖರು ವಿಜಯೋತ್ಸವ ಆಚರಿಸಿದರು. ಭಾರತದ ಬಾವುಟ ಹಿಡಿದು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಭಾರತ ಮಾತಾಕೀ ಜೈ, ವಂದೇ ಮಾತರಂ ಎಂಬ ಘೋಷಣೆ ಮೊಳಗಿಸಿದರು.

ಸಿದ್ಧೇಶ್ವರ ಬ್ಯಾಂಕ್ ನಿರ್ದೇಶಕ ಈರಣ್ಣಾ ಪಟ್ಟಣಶೆಟ್ಟಿ, ಜಗದೀಶ ಮುಚ್ಚಂಡಿ, ಸತೀಶ್ ಪಾಟೀಲ, ಬಾಬು ಜಗದಾಳೆ, ಸಂತೋಷ ಕವಲ್ದಾರ, ಸಂದೀಪ ಪಾಟೀಲ, ಪ್ರಭಾಕರ ಭೊಸ್ಲೆ, ಅಖಿಲ್ ಶೀಲವಂತ, ಗುರು ಗೋಲಗೇರಿ, ಮತ್ತಿತರರಿದ್ದರು.