ಎಲ್ಲೇಮಾಳ ಗ್ರಾಮದಲ್ಲಿ ಟಿಎಚ್‌ಒ ಡಾ.ಪ್ರಕಾಶ್ ನೇತೃತ್ವದ ತಂಡ ತಂಬಾಕು ಉತ್ಪನ್ನ ಮಾರಾಟದ ಅಂಗಡಿಗಳ ಮೇಲೆ ದಾಳಿ ನಡೆಸಿತು. ನಿಂಬೇಶ್, ಪ್ರಶಾಂತ್, ಮುನಿಸ್ವಾಮಿ ಇತರರು ಇದ್ದರು.  
ಜಿಲ್ಲೆ

ಆರೋಗ್ಯ ಅಧಿಕಾರಿಗಳಿಂದ ಕಾರ್ಯಾಚರಣೆ

ಅಭಿನಯ್ ಎಚ್.ಎಂ

ಹನೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಅಂಗಡಿಗಳ ಮೇಲೆ ಬುಧವಾರ ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದು 12,500 ರೂ.ವಿಧಿಸಿದೆ.

ತಾಲೂಕಿನ ಎಲ್ಲೇಮಾಳ, ಮಂಚಯ್ಯನಪುರ, ಸತ್ತಾರಮೇಡು, ಕೌದಳ್ಳಿ ಸೇರಿದಂತೆ ಇತರ ಗ್ರಾಮಗಳ ಚಿಲ್ಲರೆ ಅಂಗಡಿ, ಬೇಕರಿ, ಟೀ ಸ್ಟಾಲ್ ಹಾಗೂ ಇತರ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ತಂಡ ಪರಿಶೀಲನೆ ನಡೆಸಿತು. ತಂಬಾಕು ಉತ್ಪನ್ನಗಳ ಮಾರಾಟ ಸಂಬಂಧ 135 ಪ್ರಕರಣವನ್ನು ದಾಖಲಿಸಿಕೊಂಡು ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿತು.

ಬೀಡಿ, ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರ. ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಜತೆಗೆ ಯುವ ಪೀಳಿಗೆ ಜೀವನ ಹಾಳಾಗುತ್ತಿದೆ. ಆದ್ದರಿಂದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು. ಅಲ್ಲದೆ ತಂಬಾಕು ಉತ್ಪನ್ನಗಳ ನಿಷೇಧ ಸಂಬಂಧ ನಾಮಫಲಕ ಅಳವಡಿಸುವಂತೆ ಸೂಚಿಸಿದರು.

ಜಿಲ್ಲಾ ತಂಬಾಕು ನಿರ್ಮೂಲನೆ ಸಲಹೆಗಾರ ಪ್ರಶಾಂತ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ನಿಂಬೇಶ್, ಮುನಿಸ್ವಾಮಿ, ಮಂಜುನಾಥ್, ವೀರಣ್ಣ ಇದ್ದರು.