ಜಿಲ್ಲೆ

ಸಾಂಸ್ಕೃತಿಕ ನಗರಿಯಲ್ಲಿ ಸುಲ್ತಾನ್ ಡೈಮಂಡ್ಸ್ ಮಳಿಗೆ ಆರಂಭ

ಮೈಸೂರು: ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಸಂಸ್ಥೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ಚಿನ್ನಾಭರಣದ ಮಳಿಗೆಯನ್ನು ಪ್ರಾರಂಭಿಸಿದೆ.

ದಕ್ಷಿಣ ಭಾರತದ ಐಷಾರಾಮಿ ಮತ್ತು ಸಾಂಪ್ರದಾಯಿಕ ಆಭರಣಗಳ ತಯಾರಿ ಹಾಗೂ ಮಾರಾಟದ ಸಂಸ್ಥೆಯಾದ ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಮಳಿಗೆ ನಗರದ ಸಂತ ಫಿಲೋಮಿನಾ ಚರ್ಚ್ ರಸ್ತೆ, ಫೈವ್ ಲೆಟ್ಸ್ ಸರ್ಕಲ್ ಬಳಿ ಕಾರ್ಯಾರಂಭ ಮಾಡಿದ್ದು, ಇದು ಸಂಸ್ಥೆಯ 15ನೇ ಆಭರಣ ಮಳಿಗೆಯಾಗಿದೆ.

ಸಂಸ್ಥೆಯು ಈಗಾಗಲೇ ಬೆಂಗಳೂರು, ಮಂಗಳೂರು, ದಾವಣಗೆರೆ, ಕೇರಳದಲ್ಲಿ ಮಳಿಗೆಯನ್ನು ತೆರೆದಿದೆ. ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಜತೆಗೆ ಕಾರ್ಯಕ್ರಮದ ಆರಂಭದಲ್ಲಿ ‘ಮಸ್ತ್ ಮಸ್ತ್ ಹುಡ್ಗಿ ಬಂದ್ಲು’ ಹಾಡಿಗೆ ಸಕತ್ ಸ್ಟೆಪ್ ಹಾಕಿ ಗಮನ ಸೆಳೆದರು.

ಬಳಿಕ ಮಾತನಾಡಿದ ಅವರು, ಉಪೇಂದ್ರ ಅವರ ಮೂಲಕ ನಾನು ಕನ್ನಡ ಚಲನಚಿತ್ರಕ್ಕೆ ಪರಿಚಯವಾದೆ. ಅಲ್ಲದೆ ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳ ಮೂಲಕ ಹೆಸರು ಮಾಡಿದೆ. ನಾನು ಎಲ್ಲೇ ಹೋದರೂ, ಕನ್ನಡ ನಾಡಿನ ಜನರನ್ನು ಮರೆಯುವುದಿಲ್ಲ ಎಂದು ತಿಳಿಸಿದರು.

ಯಾವುದೇ ಕಂಪನಿಗಳು ಉಳಿಯಬೇಕಾದರೆ ಗ್ರಾಹಕರ ನಂಬಿಕೆ ಮುಖ್ಯವಾಗಿದೆ. ಸುಲ್ತಾನ್ ಡೈಮಂಡ್ಸ್ ಗೋಲ್ಡ್ ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಸಂಸ್ಥೆಯಾಗಿದೆ. ಸಾರ್ವಜನಿಕರು ಇಲ್ಲಿ ಎಲ್ಲ ರೀತಿಯ ಆಭರಣ ಖರೀದಿಸಬಹುದಾಗಿದೆ. ಕುಟುಂಬದ ಎಲ್ಲ ಸದಸ್ಯೆಯರ ಸಹಿತ ಎಲ್ಲ ವರ್ಗದ ಮಹಿಳೆಯರ ಹಿತಕ್ಕೆ ಅನುಗುಣವಾಗಿ, ಮನಕ್ಕೆ ಒಪ್ಪುವ ಕಲಾತ್ಮಕ ವಿನ್ಯಾಸದ ಆಭರಣಗಳ ಸಂಗ್ರಹವು ಇಲ್ಲಿದೆ. ಗ್ರಾಹಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಸ್ಟ್ಯಾನ್ಲಿ ಅಲ್ಮೆಂಡ, ಆಡಳಿತ ಮಂಡಳಿಯ ನಿರ್ದೇಶಕ ಡಾ.ಅಬ್ದುಲ್ ರಹೂಫ್, ಅಬ್ದುಲ್ ರಹೀಮ್, ಕಾಂಗ್ರೆಸ್ ಮುಖಂಡ ಅಬ್ದುಲ್ಲಾ ಇತರರಿದ್ದರು.