ಜಿಲ್ಲೆ

ಓಶಿಯನ್​ ಪರ್ಲ್​ ಟೈಮ್ಸ್​ ಸ್ಕ್ವೇರ್​ ಹೋಟೆಲ್​ ಉದ್ಘಾಟನೆ

ಉಡುಪಿ: ನಗರದ ಹೃದಯಭಾಗ ಕಲ್ಸಂಕದಲ್ಲಿರುವ ಟೈಮ್ಸ್​ ಸ್ಕ್ವೇರ್​ ಮಾಲ್​ನಲ್ಲಿ ದಿ ಓಶಿಯನ್​ ಪರ್ಲ್​ ಟೈಮ್ಸ್​ ಸ್ಕ್ವೇರ್​ ಹೋಟೆಲ್​ ಬುಧವಾರ ಲೋಕಾರ್ಪಣೆಗೊಳಿಸಲಾಯಿತು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತಿರ್ಥ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಶ್ಪಾಲ್​ ಸುವರ್ಣ, ಸುನೀಲ್​ ಕುಮಾರ್​, ಹಿರಿಯ ವಕೀಲ ಮಟ್ಟಾರ್​ ರತ್ನಾಕರ್​ ಹೆಗ್ಡೆ, ಜಗದೀಶ್​ ಅಧಿಕಾರಿ, ಓಶಿಯನ್​ ಪರ್ಲ್​ ಸಂಸ್ಥೆ ಅಧ್ಯಕ್ಷ ಜಯರಾಂ ಬನಾನ್​, ಆಡಳಿತ ನಿರ್ದೇಶಕ ರೋಶನ್​ ಬನಾನ್​, ಉಪಾಧ್ಯಕ್ಷರಾದ ಬಿ.ಎನ್​. ಗಿರೀಶ್​ ಮತ್ತು ಶಿವಕುಮಾರ್​, ಟೈಮ್ಸ್​ ಸ್ಕ್ವೇರ್​ ಮಾಲೀಕರಾದ ಡಾ.ಜೆರ್ರಿ ವಿನ್ಸಂಟ್​ ಡಯಾಸ್​, ಗ್ಲೆನ್​ ಡಯಾಸ್​, ಜೇಸನ್​ ಡಯಾಸ್​, ಜನರಲ್​ ಮ್ಯಾನೇಜರ್​ ಪ್ರಶಾಂತ್​ ಆಚಾರ್ಯ, ಉದ್ಯಮಿಗಳಾದ ಸಾಯಿರಾಧ ಮನೋಹರ್​ ಶೆಟ್ಟಿ, ಇಂದ್ರಾಳಿ ಜಯಕರ್​ ಶೆಟ್ಟಿ, ಇಬ್ರಾಹಿಂ ಕೋಡಿ, ಮಾಜಿ ಶಾಸಕ ರಘುಪತಿ ಭಟ್​, ಹ್ಯಾಂಗ್ಯೋ ಐಸ್​ ಕ್ರೀಮ್​ ಸಂಸ್ಥೆಯ ಪ್ರದಿಪ್​ ಪೈ ದಂಪತಿ, ಮಣಿಪಾಲ ಸಮೂಹ ಸಂಸ್ಥೆಗಳ ಮುಖ್ಯಸ್ಥ ಸತೀಶ್​ ಪೈ, ಸಿಇಒ ವಿನೋದ್​ ಕುಮಾರ್​, ಮಾಜಿ ಸಚಿವ ವಿನಯ ಕುಮಾರ್​ ಸೊರಕೆ, ಪೊಲೀಸ್​ ಅಧಿಕಾರಿಗಳಾದ ಪಿ.ಎ.ಹೆಗ್ಡೆ, ವೇಲೆಂಟೇನ್​ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಉಭಯ ಸ್ವಾಮೀಜಿಯವರು ಹೋಟೆಲ್​ ಮಾಲೀಕರು ಹಾಗೂ ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಉಡುಪಿ ಬಿಷಪ್​ ಡಾ.ಜೆರಾಲ್ಡ್​ ಐಸಾಕ್​ ಲೋಬೋ ಹೋಟೆಲ್​ ಗೆ ಭೇಟಿ ನೀಡಿ ಶುಭ ಹಾರೈಸಿದರು.

ದೇಗುಲಗಳ ನಗರಿ ಎಂದೇ ಖ್ಯಾತಿ ಹೊಂದಿರುವ ಉಡುಪಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಈ ಹೋಟೆಲ್​ನಿಂದ ಕೃಷ್ಣ ದರ್ಶನಕ್ಕೆ ಬರುವ ಭಕ್ತದಿಗಳಿಗೆ ಅನುಕೂಲವಾಗಲಿದೆ. ಶ್ರೀಕೃಷ್ಣನ ಉಡುಪಿಗೆ ಜಯರಾಮ್​ ಬನಾನ್​ ಅವರು ಹೋಟೆಲ್​ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿದೇಶ, ವಿದೇಶಗಳಲ್ಲಿ ಉಡುಪಿ ಹೋಟೆಲ್​ ಊಟೋಪಚಾರಕ್ಕೆ ಅತ್ಯಂತ ಪ್ರಸಿದ್ಧವಾಗಿದೆ. ಮಹಾಪ್ರಯತ್ನ ಮತ್ತು ಭಗವಂತನ ಅನುಗ್ರಹದಿಂದ ಮಾತ್ರ ಜೀವನದಲ್ಲಿ ಹಾಗೂ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯ. ಜಯರಾಮ ಬನನ್​ ಅವರು ತುಂಬಾ ವರ್ಷಗಳ ಹಿಂದೆ ದೆಹಲಿ ಹೋಗಿ ಶ್ರಮವಹಿಸಿ ಹೋಟೆಲ್​ಗಳ ಉದ್ಯಮ ಪ್ರಾರಂಭಿಸಿ ಪ್ರಗತಿ ಸಾಧಿಸಿದ್ದಾರೆ. ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಬನಾನಾ ದಂಪತಿ ಶ್ರಮ ನಿಜಕ್ಕೂ ಶ್ಲಾಘನೀಯ.ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ ಮಠ