ವಿಜಯವಾಣಿ ಸುದ್ದಿಜಾಲ ಧಾರವಾಡ
ಸತ್ತೂರಿನ ಎಸ್ಡಿಎಂ ವಿಶ್ವ ವಿದ್ಯಾಲಯವು ಎಸ್ಡಿಎಂ ಕಪ್-2024 ಶೀರ್ಷಿಕೆ ಅಡಿ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಪಂದ್ಯಾವಳಿಯನ್ನು ಅ. 2ರಂದು ಎಸ್ಡಿಎಂ ಡೆಂಟಲ್ ಕಾಲೇಜಿನ ಪರೀಕ್ಷಾ ಹಾಲ್ನಲ್ಲಿ ಆಯೋಜಿಸಲಾಗಿದೆ.
ಚೆಸ್ ಪಂದ್ಯಾವಳಿಯನ್ನು ಎಲ್ಲ ವಯೋಮಾನ ಒಳಗೊಂಡಂತೆ ಪುರುಷರು ಮತ್ತು ಮಹಿಳೆಯರ ಮುಕ್ತ ವಿಭಾಗದಲ್ಲಿ ಏರ್ಪಡಿಸಿದ್ದು, 96 ಟ್ರೋಫಿಗಳೊಂದಿಗೆ ಒಟ್ಟು 2 ಲಕ್ಷ ರೂ. ಮೌಲ್ಯದ ನಗದು ಬಹುಮಾನ ಒಳಗೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಅನುರಾಗ್ ಅವರನ್ನು ಸಂಪಕಿರ್ಸಬಹುದು ಎಂದು ಪ್ರಕಟಣೆ ತಿಳಿಸಿದೆ.