ಗಂಗಾವತಿಯ ಲಕ್ಷ್ಮಿಕ್ಯಾಂಪ್ ಶ್ರೀ ಮಹಾಲಕ್ಷ್ಮಿದೇವಾಲಯದ ಆವರಣದಲ್ಲಿ ಎಸ್‌ಕೆಡಿಆರ್‌ಡಿಪಿ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್ ಭಾನುವಾರ ಚಾಲನೆ ನೀಡಿದರು.  
ಜಿಲ್ಲೆ

ಬಯಲುಮುಕ್ತ ಬಹಿರ್ದೆಸೆ ಅಭಿಯಾನಕ್ಕೆ ಸಹಕರಿಸಿ: ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್

Gangavati - Desk - Veeresh S Ullagaddi

ಗಂಗಾವತಿ: ವೈಯಕ್ತಿಕ ಶೌಚಗೃಹ ನಿರ್ಮಾಣದ ಮೂಲಕ ಪರಿಸರ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸಬೇಕಿದ್ದು, ಬಯಲುಮುಕ್ತ ಬಹಿರ್ದೆಸೆ ಅಭಿಯಾನಕ್ಕೆ ಸಹಕರಿಸಬೇಕು ಎಂದು ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿ ಪಾಟೀಲ್ ಹೇಳಿದರು.


ನಗರದ ಲಕ್ಷ್ಮಿಕ್ಯಾಂಪ್ ಶ್ರೀ ಮಹಾಲಕ್ಷ್ಮಿದೇವಾಲಯದ ಆವರಣದಲ್ಲಿ ಎಸ್‌ಕೆಡಿಆರ್‌ಡಿಪಿಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಭಾನುವಾರ ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರ್ಥಿಕಾಭಿವೃದ್ಧಿ ಯೋಜನೆಗಳ ಜತೆಗೆ ಸಾಮಾಜಿಕ ಚಿಂತನೆ ಕಾರ್ಯಕ್ರಮಗಳಿಗೆ ಟ್ರಸ್ಟ್ ಆದ್ಯತೆ ನೀಡುತ್ತಿದ್ದು, ಮನೆಗೊಂದು ಶೌಚಗೃಹ ಕಡ್ಡಾಯಗೊಳಿಸಲಾಗಿದೆ. ಶೌಚಾಗೃಹ ನಿರ್ಮಾಣಕ್ಕಾಗಿ ನಗರಸಭೆಯಿಂದ ಪ್ರೋತ್ಸಾಹ ಧನ ನೀಡುವ ಯೋಜನೆ ಇದೆ ಎಂದರು.


ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನೀಲಕಂಠಪ್ಪ ನಾಗಶೆಟ್ಟಿ ಮಾತನಾಡಿದರು. ನಂತರ ಎಸ್.ಎಸ್.ಹಿರೇಮಠ ನೇತೃತ್ವದ ಕಲಾತಂಡದಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.

ವಕೀಲ ಶಿವಪ್ಪ ಯಲಬುರ್ಗಿ, ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಬಾಲಕಷ್ಣ ಹಿರಿಂಜ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಾರದಾ, ಮೇಲ್ವಿಚಾರಕಿ ನಾಗವೇಣಿ ಹಾಗೂ ಸೇವಾ ಪ್ರತಿನಿಧಿಗಳಿದ್ದರು.