filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 6583; AI_Scene: (-1, -1); aec_lux: 103.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 36; 
ಜಿಲ್ಲೆ

ಕಚೇರಿ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ

ರಾಘವೇಂದ್ರಗೌಡ ಭೀ ಪಾಟೀಲ್

ಯರಗಟ್ಟಿ: ನೂತನ ಯರಗಟ್ಟಿ ತಾಲೂಕಿನಲ್ಲಿ ಹಂತ ಹಂತವಾಗಿ ಎಲ್ಲ ಕಚೇರಿ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ರೈನಾಪುರ ಪ್ಲಾಟ್‌ನಲ್ಲಿ ಕಂದಾಯ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ರಿಕಾರ್ಡ್ ಕಚೇರಿ (ಅಭಿಲೇಖಾಲಯ) ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಕೆಲ ಕಚೇರಿಗಳು ಯರಗಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಉಳಿದ ಎಲ್ಲ ಕಚೇರಿ ಕಾರ್ಯಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಚಂದ್ರಶೇಖರ ಸ್ವಾಮೀಜಿ, ಗಣಪತಿ ಮಹಾರಾಜರು, ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಜಿಪಂ ಮಾಜಿ ಸದಸ್ಯ ಅಜಿತ್‌ಕುಮಾರ ದೇಸಾಯಿ, ಮುಖಂಡ ನಿಖಿಲ ದೇಸಾಯಿ, ಪಪಂ ನಾಮ ನಿರ್ದೇಶನ ಸದಸ್ಯರಾದ ನಿಖಿಲ ಪಾಟೀಲ, ಸಲೀಂ ಜಮಾದಾರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ಮಂಜುನಾಥ ತಡಸಲೂರ, ಲಕ್ಕಪ್ಪ ಸನ್ನಿಂಗನವರ, ರತ್ನಾಕರ ಶೆಟ್ಟಿ, ವಿಠ್ಠಲ ಬಂಟನೂರ, ಶಿವಾನಂದ ಕರಿಗನ್ನವರ, ಈರಣ್ಣ ಗೌಡರ, ಕಾಶಿಮಸಾಬ್ ಹೊರಟ್ಟಿ, ಮಹಾಂತೇಶ ಉಪ್ಪಿನ ಇತರರಿದ್ದರು.