ಕಡಬ:ಪ್ರತೀ ವರ್ಷವೂ ಪಂಜ-ಕೋಡಿಂಬಾಳ-ಕಡಬ ರಸ್ತೆಯ ಮೂಲಕ ಕಾಡಾನೆ ಸಂಚರಿಸುವ ಕಾಡಾನೆಯೊಂದು ಈ ಬಾರಿಯೂ ಸಂಚರಿಕೊಂಡು ಬಂದು ಕಡಬ ಸಮೀಪದ ಪುಳಿಕುಕ್ಕು ಕಾಡಿನಲ್ಲಿ ಭಾನುವಾರ ತಡ ರಾತ್ರಿ ಉಳಿದುಕೊಂಡಿದೆ.
ಈ ಒಂಟಿ ಸಲಗ ಬಂಟಮಲೆ ಅರಣ್ಯ ಪ್ರದೇಶದಿಂದ ನಿನ್ನೆ ರಾತ್ರಿ ಪಂಬೆತ್ತಾಡಿ ಮೂಲಕ ಕರಿಕ್ಕಳದಲ್ಲಿ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯನ್ನು ದಾಟಿದೆ. ಬಳಿಕ ಪಂಜದ ಗಾಳಿಬೀಡು ಮೂಲಕ ಚಿಂಗಾಣಿಗುಡ್ಡೆ, ಬೊಳ್ಳಾಜೆ , ನೆಕ್ಕಿಲ ಸಮೀಪದಲ್ಲಿ ಕೃಷಿ ತೋಟಗಳ ಮೂಲಕ ಸಂಚರಿಸಿ ಪುಳಿಕುಕ್ಕು ಅರಣ್ಯದಲ್ಲಿ ಉಳಿದಿದೆ. ಮನೆ ಮುಂದಿನ ರಸ್ತೆಯಲ್ಲಿ ಹಾದು ಹೊಗುವ ಮೊಬೈಲ್ ನಲ್ಲಿ ಸ್ಥಳಿಯರು ಸೆರೆ ಹಿಡಿದಿದ್ದಾರೆ.ಯಾವುದೇ ಸಮಯದಲ್ಲಿ ಜನವಸತಿ ಇರುವ ಪ್ರದೇಶದ ಮೂಲಕ ಕೋಡಿಂಬಾಳ ಗ್ರಾಮವನ್ನು ದಾಟಿ ಕಡಬ ಮೂಲಕ ಇಚಿಲಂಪಾಡಿ ಕಾಡನ್ನು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ .ಈ ಪ್ರದೇಶದಲ್ಲಿ ಸಂಚರಿಸುವವರು ಜಾಗೃತಿ ವಹಿಸ ಬೇಕಾಗಿದೆ ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.