ಜಿಲ್ಲೆ

ಮೀನುಗಾರಿಕೆ ನಡೆಸುತ್ತಿದವರ ಮೇಲೆ ಸಮುದ್ರದ ಮಧ್ಯೆ ನೌಕಾದಳ ಸಿಬ್ಬಂದಿ ಹಲ್ಲೆ..?

theerthaswamy

ಉತ್ತರಕನ್ನಡ: ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ಘಟನೆ ಕಾರವಾರ ಸಮೀಪದ ಕೋಡಾರ ಸಮುದ್ರದಲ್ಲಿ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ನೌಕಾದಳ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಮುದಗಾದಿಂದ ಹೊರಟ ವೈಶಾಲಿ ಫಿಶಿಂಗ್ ಬೋಟ್ ಸಿಬ್ಬಂದಿ 16 ಮೀಟರ್ ಆಳದ ಸಮುದ್ರದಲ್ಲಿ ಮೀನು ಹಿಡಿಯಲು ಮುಂದಾಗಿದ್ದಾರೆ.

ಈ ವೇಳೆ ಬಂದ ನೌಕಾದಳ ಸಿಬ್ಬಂದಿ, ಜಯವಂತ ಹರಿಕಾಂತ, ಬುಧವಂತ ಲಿಂಗಾ ದುರ್ಗೆಕರ ಎಂಬುವವರಿಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳುಗಳನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.