ಗುಂಜಳ್ಳಿ ಗ್ರಾಪಂನಲ್ಲಿ ಆಯೋಜಿಸಿದ್ದ ಮಹಿಳಾ ಸ್ನೇಹಿ ಗ್ರಾಪಂ ಅಭಿಯಾನ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ತಾಪಂ ಇಒ ಚಂದ್ರಶೇಖರ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಅಂಬಣ್ಣ, ಪಂಚಾಯತ್‌ರಾಜ್ ಪ್ರತಿನಿಧಿ ಧನ್ಯಪ್ರಭು, ಪಿಡಿಒ ಪಂಪನಗೌಡ ಸಿದ್ದಾಪುರ, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ, ಜಿಪಿಎಲ್‌ಎಫ್ ಅಧ್ಯಕ್ಷೆ ವಿಜಯಲಕ್ಷ್ಮೀ ಕೋಳೂರು ಇದ್ದರು. 
ಜಿಲ್ಲೆ

ಕೇವಲ ಮನೆ ಕೆಲಸಕ್ಕೆ ಸೀಮಿತವಲ್ಲ

Kopala - Desk - Eraveni

ಸಿಂಧನೂರು: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸಬೇಕೆಂದು ತಾಪಂ ಇಒ ಚಂದ್ರಶೇಖರ ಹೇಳಿದರು.

ತಾಲೂಕಿನ ಗುಂಜಳ್ಳಿ ಗ್ರಾಪಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸ್ನೇಹಿ ಗ್ರಾಪಂ ಅಭಿಯಾನ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಕೇವಲ ಮನೆ ಕೆಲಸಕ್ಕೆ ಸೀಮಿತ ಎಂಬ ಕಾಲ ಮರೆಯಾಗಿದೆ. ಪುರುಷರಂತೆ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸ್ವತಂತ್ರವಾಗಿ ಬದುಕು ನಡೆಸುವ ಮಟ್ಟಿಗೆ ಅಭಿವೃದ್ಧಿ ಹೊಂದಿದ್ದಾರೆ ಎಂದರು.

ಮಹಿಳೆಯರಿಗೆ ರಂಗೋಲಿ, ಮ್ಯೂಸಿಕಲ್ ಚೇರ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳೆಯರಿಂದ ಜಾನಪದ ಗೀತೆಗಳು, ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಸಲಾಯಿತು. ಗ್ರಾಪಂ ಅಧ್ಯಕ್ಷ ಅಂಬಣ್ಣ, ಪಂಚಾಯತ್‌ರಾಜ್ ಪ್ರತಿನಿಧಿ ಧನ್ಯಪ್ರಭು, ಪಿಡಿಒ ಪಂಪನಗೌಡ ಸಿದ್ದಾಪುರ, ಅಂಗನವಾಡಿ ಕಾರ್ಯಕರ್ತೆ ಪಾರ್ವತಿ, ಜಿಪಿಎಲ್‌ಎಫ್ ಅಧ್ಯಕ್ಷೆ ವಿಜಯಲಕ್ಷ್ಮೀ ಕೋಳೂರು, ಕಿರಿಯ ಆರೋಗ್ಯ ಸಹಾಯಕಿ ಮುದೀನ್‌ಬೀ ಇತರರಿದ್ದರು.