ಹೊಳೆಹೊನ್ನೂರು: ದೇಶದ ಅಭಿವೃದ್ಧಿ ಕಾಂಗ್ರೆಸ್‌ನಿAದ ಮಾತ್ರ ಸಾಧ್ಯ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಹನುಮಂತಪ್ಪ ಹೇಳಿದರು.
ಗುರುವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಅಽಕಾರ ಹಿಡಿದಿರುವ ಕಾಂಗ್ರೆಸ್ ತನ್ನ ಮಹತ್ತರವಾದ ೫ ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡಿ ಸಮಾಜದ ಎಲ್ಲ ಜನಾಂಗದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಾಂಗ್ರೆಸ್‌ನಿAದ ಮಾತ್ರ ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ಸಾಧ್ಯ ಎಂದರು.
ಪ್ರಚಾರ ಸಮಿತಿ ಅಧ್ಯಕ್ಷ ಆರ್.ಉಮೇಶ್ ಮಾತನಾಡಿ, ಜವಹರ್‌ಲಾಲ್ ನೆಹರು, ರಾಜೀವ್ ಗಾಂಽ, ಮನಮೋಹನ್ ಸಿಂಗ್ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ನಮ್ಮ ಪಕ್ಷ ಸಫಲವಾಗಿದೆ. ಇತ್ತೀಚೆನ ದಿನಗಳಲ್ಲಿ ಬಿಜೆಪಿ ಕೋಮುಗಲಭೆ ಮೂಲಕ ರಾಜಕೀಯ ಮಾಡುತ್ತಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಜನರ ಒಗ್ಗಟ್ಟನ್ನು ಒಡೆದು ಆಳಲು ಪ್ರಯತ್ನಿಸುತ್ತಿದೆ. ಅಲ್ಲದೆ ಜನರಿಗೆ ಕೇವಲ ಸುಳ್ಳು ಹೇಳುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು. ಶ್ರೀನಿವಾಸ್ ಕರಿಯಣ್ಣ, ಎಚ್.ಆರ್.ತಿಮ್ಮಪ್ಪ, ಶ್ರೀನಿವಾಸ್, ನಿತಿನ್, ಶೇಖರಪ್ಪ, ಎಚ್.ಎನ್.ನಾಗರಾಜ್, ಕಿರಣ್ ಮೋರೆ, ಎಚ್.ಬಿ.ನಾಗರಾಜ್, ಕೇಶವ, ಪರಶುರಾಮ್ ಇತರರಿದ್ದರು.