ಜಿಲ್ಲೆ

20 ಕೆರೆಗಳಿಗೆ ಮಾತ್ರ ಜಲಭಾಗ್ಯ!

ಆನಂದ ಭಮ್ಮನ್ನವರ ಚಿಕ್ಕೋಡಿ

ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೆರೆ ತುಂಬಿಸುವ ಯೋಜನೆ ರೂಪಿಸಿದೆ. ಆದರೆ, ಜಿಲ್ಲೆಯಲ್ಲಿ 290 ಕೆರೆಗಳ ಪೈಕಿ 20 ಕೆರೆಗಳು ಇದರ ಲಾಭ ಪಡೆದುಕೊಂಡಿವೆ. ನೀರಾವರಿ ಕನಸಿನಲ್ಲಿ ಇದ್ದ ಬಹುತೇಕ ರೈತರಿಗೆ ನಿರಾಸೆ ಉಂಟಾಗಿದೆ.

ಹುಕ್ಕೇರಿ ತಾಲೂಕಿನಲ್ಲಿ 8, ಬೆಳಗಾವಿ ತಾಲೂಕಿನಲ್ಲಿ 4, ಸವದತ್ತಿ ತಾಲೂಕಿನಲ್ಲಿ 1, ರಾಮದುರ್ಗ ತಾಲೂಕಿನಲ್ಲಿ 2, ಗೋಕಾಕ ತಾಲೂಕಿನಲ್ಲಿ 6 ಕೆರೆಗಳು ಸೇರಿ ಒಟ್ಟು ಜಿಲ್ಲೆಯಲ್ಲಿ 20 ಕೆರೆಗಳಿಗೆ ಮಾತ್ರ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಆ ಭಾಗದ ರೈತರಿಗೆ ನೀರಾವರಿ ಅನುಕೂಲವಾಗಿದೆ. ಆದರೆ, ಯೋಜನೆ ಪೂರ್ಣಗೊಂಡ ಕೆರೆಗಳಿಗೂ ಪ್ರಸ್ತುತ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಇರುವುದು ಅನ್ನದಾತರ ಚಿಂತೆಗೆ ಕಾರಣವಾಗಿದೆ.

ಯಾವ ತಾಲೂಕಿನಲ್ಲಿ ಎಷ್ಟು ಕೆರೆಗಳಿವೆ?: ಬೆಳಗಾವಿ27, ಖಾನಾಪೂರ 40 , ಬೈಲಹೊಂಗಲ 14 ,ಕಿತ್ತೂರ 21, ಹುಕ್ಕೇರಿ 42, ಗೋಕಾಕ 9, ಸವದತ್ತಿ 36, ರಾಮದುರ್ಗ 28, ರಾಯಬಾಗ 13, ಅಥಣಿ 36, ಕಾಗವಾಡ 3, ಚಿಕ್ಕೋಡಿ 17, ನಿಪ್ಪಾಣಿ 4 ಕೆರೆ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ 290 ಕೆರೆಗಳಿವೆ. ಹುಕ್ಕೇರಿ ತಾಲೂಕಿನ 19, ಅಥಣಿ ತಾಲೂಕಿನ 9 ಸೇರಿ ಒಟ್ಟು 28 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಆ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಗುರುಬಸವರಾಜಯ್ಯ ಬಿ.ಎಂ ಕಾರ್ಯನಿರ್ವಾಹಕ ಅಭಿಯಂತ ಸಣ್ಣ ನೀರಾವರಿ ಇಲಾಖೆ ವಿಭಾಗ,ಬೆಳಗಾವಿ ಜಿಲ್ಲೆಯ 290 ಕೆರೆಗಳ ಪೈಕಿ ಕೇವಲ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಿರುವುದು ವಿಷಾದನೀಯ. ಜನಪ್ರತಿನಿಧಿ-ಗಳು ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಮಂಜೂರು ಮಾಡಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು. ಚುನಪ್ಪ ಪೂಜೇರಿ, ಅಧ್ಯಕ್ಷ, ರೈತ ಸಂಘ ಹಸಿರು ಸೇನೆ