ಜಿಲ್ಲೆ

ಯೋಗ ಶಿಕ್ಷಕರ ಆನ್​ಲೈನ್ ತರಬೇತಿ ಶಿಬಿರಕ್ಕೆ ಡಾ.ವಿಜಯಸಂಕೇಶ್ವರರಿಂದ ಚಾಲನೆ

ಹುಬ್ಬಳ್ಳಿ: ಹರಿದ್ವಾರ ಪತಂಜಲಿ ಯೋಗ ಪೀಠ ವತಿಯಿಂದ ಹಮ್ಮಿಕೊಂಡಿರುವ ಯೋಗ ಶಿಕ್ಷಕರ ಆನ್‌ಲೈನ್ ತರಬೇತಿ ಶಿಬಿರಕ್ಕೆ ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಚಾಲನೆ ನೀಡಿದರು. ಅಗ್ನಿಹೋತ್ರ, ಪ್ರಾಣಾಯಾಮ ಹಾಗೂ ಯೋಗ ದೀಪ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಒಂದು ತಿಂಗಳ ಕಾಲ ಶಿಬಿರ ನಡೆಯಲಿದ್ದು, ತರಬೇತಿ ಪಡೆದವರಿಗೆ ಆಯುಷ್ ಇಲಾಖೆಯ ಪ್ರಮಾಣ ಪತ್ರ ನೀಡಲಾಗುತ್ತದೆ. ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲ ಆರ್ಯ ಸೇರಿ ದೇಶ- ವಿದೇಶಗಳ 1 ಸಾವಿರ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.