ಜಿಲ್ಲೆ

ಪ್ರಥಮ ಪಿಯುಸಿಗೆ ಆನ್​ಲೈನ್​ ಪರೀಕ್ಷೆ! ವಿದ್ಯಾರ್ಥಿಗಳ ನೇರ ಪಾಸ್​ ಇಲ್ಲ, 2 ಪ್ರಶ್ನೆಪತ್ರಿಕೆ ಎಕ್ಸಾಂ ನಡೆಸಲು ಸೂಚನೆ

| ದೇವರಾಜ್​ ಕನಕಪುರ

ಬೆಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಈ ಬಾರಿ ಪರೀೆ ಇರಲ್ಲ ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ, ಇದೀಗ ಪ್ರಮೋಟ್​ಗೆ ಆನ್​ಲೈನ್​ನಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವುದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಕಿರಿ-ಕಿರಿ ತರಿಸಿದೆ.

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪರೀೆ ಇರಲ್ಲ ಎಂದು ಸರ್ಕಾರ ಘೋಷಣೆ ಮಾಡಿದ ಬಳಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವುದನ್ನು ನಿಲ್ಲಿಸಿದ್ದಾರೆ. ಇದೀಗ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿಗೆ ಎರಡು ಮಾದರಿಯ ಪ್ರಶ್ನೆಪತ್ರಿಕೆ ರೂಪಿಸಿ ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಿದೆ. ಈ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳು ಡೌನ್​ಲೋಡ್​ ಮಾಡಿಕೊಂಡು ಉತ್ತರ ಬರೆದು, ವಾಟ್ಸ್​ಆ್ಯಪ್​, ಇ&-ಮೇಲ್​, ಅಂಚೆ ಮೂಲಕ ಉಪನ್ಯಾಸಕರಿಗೆ ಸಲ್ಲಿಸಬೇಕು. ಅದನ್ನು ಉಪನ್ಯಾಸಕರು ಮೌಲ್ಯಮಾಪನ ಮಾಡಿ ಸ್ಟೂಡೆಂಡ್​ ಅಚೀವ್​ಮೆಂಟ್​ ಟ್ರಾಕಿಂಗ್​ ಸಿಸ್ಟಂ(ಎಸ್​ಎಟಿಎಸ್​)ನಲ್ಲಿ ಅಪ್​ಲೋಡ್​ ಮಾಡುವಂತೆ ಸೂಚಿಸಲಾಗಿದೆ.

ಮೊದಲು ಎಲ್ಲ ವಿದ್ಯಾರ್ಥಿಗಳು ಪಾಸ್​ ಎಂದು ಘೋಷಿಸಿ, ಇದೀಗ ಪ್ರತ್ಯೇಕವಾಗಿ ಅಸೈನ್​ಮೆಂಟ್​ ಲೆಕ್ಕಚಾರದಲ್ಲಿ ಪರೀಕ್ಷೆ ನಡೆಸುವಂತೆ ಘೋಷಿಸಿರುವುದು ಪಿಯು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಕಿರಿ-ಕಿರಿ ತಂದಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆಯನ್ನೇ ಮಾಡಿಕೊಳ್ಳದಿರುವುದರಿಂದ ಕಡಿಮೆ ಅಂಕ ತೆಗೆದುಕೊಳ್ಳುವ ಆತಂಕದಲ್ಲಿದ್ದಾರೆ. ಇನ್ನು ಉಪನ್ಯಾಸಕರು ಸಹ ಈ ರೀತಿಯ ಮೌಲ್ಯಾಂಕನದ ಬಗ್ಗೆ ನಿರೀಕ್ಷೆ ಮಾಡಿರಲಿಲ್ಲ. ಜು.20ರೊಳಗೆ ಪ್ರಕ್ರಿಯೆ ಪೂರ್ಣ: ಮೊದಲ ಪ್ರಶ್ನೆಪತ್ರಿಕೆ(ಅಸೈನ್​ಮೆಂಟ್​)ಗೆ ಉತ್ತರಿಸಿ ವಿದ್ಯಾರ್ಥಿಗಳು ಉಪನ್ಯಾಸಕರಿಗೆ ಸಲ್ಲಿಸಲು ಜೂ.20 ಕೊನೆಯ ದಿನವಾಗಿದೆ. ಉಪನ್ಯಾಸಕರು ಜೂ.25ರೊಳಗೆ ಮೌಲ್ಯಮಾಪನ ಮಾಡಬೇಕಿದೆ. ಇದೇ ರೀತಿ ಎರಡನೇ ಪತ್ರಿಕೆಗೆ ಉತ್ತರಿಸಿ ಜೂ.26ರಿಂದ ಜು.5ರೊಳಗೆ ಸಲ್ಲಿಸಬೇಕು. ಉಪನ್ಯಾಸಕರು ಜು.10ರೊಳಗೆ ಮೌಲ್ಯಮಾಪನ ಮಾಡಬೇಕು. ಎರಡು ಪರೀಕ್ಷೆಗಳ ಅಂಕಗಳ ಸಮೀಕರಣವನ್ನು ಜು.15 ರೊಳಗೆ ಮುಗಿಸಿ ಜು.20 ರೊಳಗೆ ಎಸ್​ಎಟಿಎಸ್​ಗೆ ಅಪ್​ಲೋಡ್​ ಮಾಡಬೇಕು. ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಕಡ್ಡಾಯವಾಗಿ ನೀಡಬೇಕು. ಪ್ರತಿ ಪತ್ರಿಕೆಗೆ 30 ರಂತೆ ಎರಡು ಪತ್ರಿಕೆಗೆ 60 ಅಂಕ ನೀಡಬೇಕು. 5 ಅಂಕಗಳನ್ನು ಉಪನ್ಯಾಸಕರು ಆಂತರಿಕ ಮೌಲ್ಯಮಾಪನವೆಂದು ನೀಡಬೇಕು. ಪ್ರಯೋಗ ಸಹಿತ ವಿಷಯಗಳಿಗೆ ಪ್ರತ್ಯೇಕವಾಗಿ ಅಂಕಗಳನ್ನು ನೀಡಬೇಕಿದೆ. ಈ ಹಿಂದೆ ನಡೆಸಿದ ಪ್ರಯೋಗಿಕ ತರಗತಿಗಳ ಆಧಾರದ ಮೇಲೆ ನಿಪ್ಪಕ್ಷಪಾತವಾಗಿ ಅಂಕ ನೀಡಬೇಕೆಂದು ಇಲಾಖೆ ತಿಳಿಸಿದೆ.

ಪ್ರಥಮ ಪಿಯು ಪಾಸ್​ ಎಂದು ಸಚಿವರು ಘೋಷಣೆ ಮಾಡಿದ ತಕ್ಷಣವೇ ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಖುಷಿಯಲ್ಲಿದ್ದಾರೆ. ಇವರಿಗೆ ಇದೀಗ ಪರೀಕ್ಷೆ ನಡೆಸಿ ಎಂದರೆ ಹೇಗೆ? ಇದು ಸಾಧ್ಯವೇ? -> ಹೆಸರು ಹೇಳಲಿಚ್ಛಿಸದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ