ಜಿಲ್ಲೆ

ಆನ್ ಲೈನ್ ಪ್ರವಚನ 18ರಿಂದ

ಹುಬ್ಬಳ್ಳಿ: ಇಲ್ಲಿಯ ಆರ್ಯ ವೈಶ್ಯ ಸಮಾಜ ಶ್ರೀ ನಗರೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ 89ನೇ ಜ್ಞಾನಯಜ್ಞ ಕಾರ್ಯಕ್ರಮವನ್ನು ಆ. 18ರಿಂದ ಸೆಪ್ಟೆಂಬರ್ 15ರ ವರೆಗೆ ಆನ್‌ಲೈನ್ ಮೂಲಕ ಆಯೋಜಿಸಲಾಗಿದೆ.

ಚಿನ್ಮಯ ಮಿಷನ್ನ ಸ್ವಾಮಿ ಕೃತಾತ್ಮಾನಂದ ಅವರು ನಿತ್ಯ ಬೆಳಗ್ಗೆ 8.30ಕ್ಕೆ ಮೈತ್ರೇಯ ಉಪನಿಷತ್ ಹಾಗೂ ಸಂಜೆ 6.30ಕ್ಕೆ ಭಗವದ್ಗೀತೆ 2ನೇ ಅಧ್ಯಾಯ ಕುರಿತು ಪ್ರವಚನ ನೀಡುವರು.

ನಗರೇಶ್ವರ ದೇವಸ್ಥಾನದಲ್ಲಿ ಆ. 17ರಂದು ಸಂಜೆ 5.30ಕ್ಕೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ಸ್ವಾಮಿ ಕೃತಾತ್ಮಾನಂದ ಅವರು ಅಧ್ಯಕ್ಷತೆ ವಹಿಸುವರು.

ಆರ್ಯವೈಶ್ಯ ಸಮಾಜ ಚೀಫ್ ಟ್ರಸ್ಟಿ ರ್ಪೂಣಚಂದ್ರರಾವ್ ಘಂಟಸಾಲ, ಮೋಹನರಾಜ ಇಲ್ಲೂರ, ಬಸವರಾಜ ಬಾಗಲಕೋಟಿ, ವಾಸವಿ ಮಹಿಳಾ ಮಂಡಳದ ಸದಸ್ಯೆಯರು ಇತರರು ಪಾಲ್ಗೊಳ್ಳುವರು.