ಹಾವೇರಿ: ಆಲ್ನೈನ್ನ 1 ರೇಟಿಂಗ್ಗೆ 50 ರೂ. ಲಾಭಾಂಶ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 2.29 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಇಜಾರಿಲಕಮಾಪುರದ ನಿವಾಸಿ ಶಾರದಾ ಆರ್. ಹನುಮಾಪುರ (35) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಅಜಯ ಚವ್ಹಾಣ ಎನ್ನುವ ಹೆಸರಿನ ವ್ಯಕ್ತಿ ಕರೆ ಮಾಡಿ ಲಿಂಕ್ವೊಂದನ್ನು ಕಳುಹಿಸಿದ್ದಾನೆ. ಅದರ ಮೂಲಕ ಆಲ್ಲೈನ್ 1 ರೇಟಿಂಗ್ಗೆ 50 ರೂ. ಲಾಭಾಂಶ ಕೊಡುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಶಾರದಾ 2.29 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಲಾಭಾಂಶ ಹಾಗೂ ಅಸಲು ಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.