ಜಿಲ್ಲೆ

ದೇವರಿಗೂ ಆನ್​ಲೈನ್​ ಪೇಮೆಂಟ್​

ತುಮಕೂರು ಡೆಸ್ಕ್

ಚಿಕ್ಕನಾಯಕನಹಳ್ಳಿ ತಾಲೂಕಿನ ಮುಜರಾಯಿ ದೇಗುಲಯಗಳಲ್ಲಿ ಇ-ಹುಂಡಿ ವ್ಯವಸ್ಥೆ

ಮಂಜುನಾಥ ಅರಸ್​, ಚಿಕ್ಕನಾಯಕನಹಳ್ಳಿ
ತಾಲೂಕಿನಲ್ಲಿನ ಮುಜರಾಯಿ ಇಲಾಖೆ ವ್ಯಾಪ್ತಿಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಇ&ಹುಂಡಿ ವ್ಯವಸ್ಥೆ ಜಾರಿಗೊಳಿಸುವ ಮೂಲಕ ದೇವಸ್ಥಾನಗಳ ಆದಾಯ ವೃದ್ಧಿಗೆ ಇಲಾಖೆ ಮುಂದಾಗಿದ್ದು, ೋನ್​ ಪೇ, ಗೂಗಲ್​ ಪೇ ಸೇರಿ ಯುಪಿಐನಿಂದ ದೇವರಿಗೆ ಹಣ ಸಂದಾಯ ಮಾಡುವ ಅವಕಾಶ ಕಲ್ಪಿಸುತ್ತಿದೆ. ತಾಲೂಕಿನಲ್ಲಿ ಒಟ್ಟು 225 ದೇವಾಲಯಗಳು ಮುಜರಾಯಿ ವ್ಯಾಪ್ತಿಯಲ್ಲಿದ್ದು, ಈ ಪೈಕಿ ಯಳನಡು ಸಿದ್ದರಾಮೇಶ್ವರ, ಗೋಡೆಕೆರೆ ಸಿದ್ದರಾಮೇಶ್ವರ, ಹಳೆಯೂರು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಈಗಾಗಲೇ ಇ&ಹುಂಡಿ ವ್ಯವಸ್ಥೆ ಇದೆ. ಇನ್ನೂ 18 ದೇವಾಲಯಗಳಲ್ಲಿ ಇ&ಹುಂಡಿಗೆ ಎಸ್​ಬಿಐ ಬ್ಯಾಂಕ್​ಗೆ ಮುಜರಾಯಿ ಇಲಾಖೆ ಪತ್ರ ಬರೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಇ&ಹುಂಡಿ ಜಾರಿಗೊಳಿಸಿದರೆ ೋನ್​ ಪೇ ಮೂಲಕ ದೇವರಿಗೂ ಹಣ ಸಂದಾಯ ಮಾಡುವ ಜತೆಗೆ ಸರ್ಕಾರದ ಆದಾಯ ಹೆಚ್ಚಾಗಲಿದೆ.


ಸೌಕರ್ಯ ಕೊರತೆ: -ಮುಜರಾಯಿ ದೇವಾಲಯ ಗಳಿಂದ ಆದಾಯ ಪಡೆಯುವ ಸರ್ಕಾರ, ಈ ಎಲ್ಲ ದೇವಾಲಯಗಳಿಗೆ ಅಗತ್ಯ ಸೌಲಭ್ಯ ನೀಡುವಲ್ಲಿ ಹಾಗೂ ದೇವಾಲಯಗಳ ಆಸ್ತಿ ಗುರುತಿಸುವಲ್ಲಿ ಕ್ರಮಕೈಗೊಳ್ಳುತ್ತಿಲ್ಲ. ಕೆಲ ದೇವಾಲಯಗಳಲ್ಲಿನ ಅರ್ಚಕರಿಗೆ ಸೂಕ್ತ ತಸ್ತೀಕ್​ ಹಣ ನೀಡದೆ ತಾರತಮ್ಯ ಮಾಡುತ್ತಿದೆ. ಆದಾಯ ವೃದ್ಧಿಗಷ್ಟೇ ಕ್ರಮವಹಿಸಲಾಗುತ್ತಿದೆ ಎಂಬ ಆರೋಪವೂ ಮುಜರಾಯಿ ಇಲಾಖೆ ವಿರುದ್ಧ ಇದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿಯೂ ಕ್ರಮವಹಿಸಬೇಕಿದೆ.

ದೇವಾಳ ಗುರುತಿಸಿ ಆದಾಯ ವೃದ್ಧಿ: ತಾಲೂಕಿನ ಮುಜರಾಯಿ ದೇವಾಲಯಗಳ ಆಸ್ತಿ ಗುರುತಿಸುವಲ್ಲಿ ಹಾಗೂ ಅದರಿಂದ ಸರ್ಕಾರದ ಆದಾಯ ವೃದ್ಧಿಸುವಲ್ಲಿ ಇಲಾಖೆ ಅಧಿಕಾರಿಗಳು ಇನ್ನಷ್ಟು ಕಾಯೋರ್ನ್ಮುಖರಾಗಬೇಕಿದೆ. ತಾಲೂಕಿನ ಒಟ್ಟು 225 ದೇವಾಲಯಗಳಲ್ಲಿ ಕೇವಲ 12 ದೇವಾಲಯಗಳ ಆಸ್ತಿ ಗುರುತಿಸಲಾಗಿದ್ದು, ಯಳನಡು ಸಿದ್ದರಾಮೇಶ್ವರ ದೇವಾಲಯಕ್ಕೆ ಸರ್ವೇ ನಂ.55ರಲ್ಲಿ 18 ಗುಂಟೆ, ಸ.ನಂ. 57ರಲ್ಲಿ 6 ಗುಂಟೆ ಜಾಗವಿದ್ದು, ಗೋಡೆಕೆರೆ ಸಿದ್ದರಾಮೇಶ್ವರ ದೇವಾಲಯಕ್ಕೆ ಗೋಡೆಕೆರೆ ಸ.ನಂ.192ರಲ್ಲಿ 47.36ಎಕರೆ, ಪಟ್ಟಣದ ಶ್ರೀ ಪ್ರಸನ್ನ ರಾಮೇಶ್ವರ ದೇವಾಲಯಕ್ಕೆ ಚಿಕ್ಕಬಿದರೆ ಸ.ನಂ. 59ನಲ್ಲಿ 35.1 ಎಕರೆ, ಹಾಲುಗೋಣದ ಬಸವಣ್ಣ ದೇವಾಲಯಕ್ಕೆ ಸ.ನಂ.6ರಲ್ಲಿ 3.21 ಎಕೆರೆ, ಬ್ಯಾಡರಹಳ್ಳಿ ಸ.ನಂ.1ರಲ್ಲಿ 1.16 ಎಕರೆ, ಸ.ನಂ.73ರಲ್ಲಿ 1.38 ಎಕರೆ, ಸ.ನಂ.77ರಲ್ಲಿ 1.7 ಎಕರೆ, ಬ್ಯಾಡರಹಳ್ಳಿ ಬೈರವೇಶ್ವರ ದೇವಾಲಯಕ್ಕೆ ಸ.ನಂ.3ರಲ್ಲಿ 1.11 ಎಕರೆ, ಪಂಕಜನಹಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ಪಂಕಜನಹಳ್ಳಿ ಸ.ನಂ.1ರಲ್ಲಿ 14.6 ಎಕರೆ, ಸ.ನಂ.10ರಲ್ಲಿ 2.36 ಎಕರೆ, ಸ.ನಂ.110ರಲ್ಲಿ 1.14 ಎಕರೆ ಜಮೀನಿದ್ದು, ಇನ್ನುಳಿದ ದೇವಾಲಯಗಳಿಗೆ ಎಷ್ಟು ಜಮೀನಿದೆ ಎಂಬುದರ ಲೆಕ್ಕಾಚಾರದಲ್ಲಿಯೇ ಅಧಿಕಾರಿಗಳಿದ್ದಾರೆ. ಕೂಡಲೇ ಎಲ್ಲ ದೇವಾಲಯಗಳ ಆಸ್ತಿ ಗುರುತಿಸಿದರೆ ಇಲಾಖೆಯ ಆದಾಯವೂ ಹೆಚ್ಚಲಿದೆ.

ಮುಜರಾಯಿ ವ್ಯಾಪ್ತಿಯಲ್ಲಿ 225 ದೇವಾಲಗಳು: ತಾಲೂಕಿನ ಐದೂ ಹೋಬಳಿಗಳಲ್ಲಿ ಮುಜುರಾಯಿ ದೇವಾಲಯಗಳಿದ್ದು, ಹುಳಿಯಾರು ಹೋಬಳಿಯಲ್ಲಿ 52 ದೇವಾಲಯಗಳು (ಒಂದು ದೇವಸ್ಥಾನ ಬಿ ಕೆಟಗರಿ), ಹಂದನಕೆರೆ ಹೋಬಳಿಯಲ್ಲಿ 60, ಶೆಟ್ಟಿಕೆರೆ ಹೋಬಳಿಯಲ್ಲಿ 52(ಒಂದು ದೇವಾಲಯ ಬಿ ಕೆಟಗರಿ), ಕಂದಿಕೆರೆ ಹೋಬಳಿಯಲ್ಲಿ 25, ಕಸಬಾ ಹೋಬಳಿಯಲ್ಲಿ 36 ದೇವಾಲಯಗಳು ಸೇರಿ ತಾಲೂಕಿನಲ್ಲಿ ಒಟ್ಟು 225 ದೇವಾಲಯಗಳಿವೆ.


5 ರಿಂದ 25 ಲಕ್ಷ ರೂ. ಗಳಿಕೆ: ಹುಳಿಯಾರು ಹೋಬಳಿಯ ಯಳನಡು ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಹಾಗೂ ಶೆಟ್ಟಿಕೆರೆ ಹೋಬಳಿಯ ಶ್ರೀ ಸಿದ್ದರಾಮೇಶ್ವರ ದೇವಾಲಯಗಳು ಬಿ.ಕೆಟಗರಿಗೆ ಸೇರಿದ್ದು, ಉಳಿದ 223 ದೇವಸ್ಥಾನಗಳು ಸಿ ಕೆಟಗರಿಗೆ ಸೇರಿವೆ. ವಾರ್ಷಿಕ 5 ಲಕ್ಷ ದಿಂದ 25 ಲಕ್ಷ ರೂ. ವರೆಗೆ ಆದಾಯ ಸಂಗ್ರಹವಾಗುತ್ತಿದ್ದು, ಕೆಲವನ್ನು ಬಿ ಕೆಟಗರಿಗೆ ಸೇರಿಸಲಾಗಿದೆ. ಇವುಗಳ ಆದಾಯಕ್ಕೆ ತಕ್ಕಂತೆ ಅರ್ಚಕರಿಗೆ ತಸ್ತೀಕ್​ ಹಣ ನೀಡಲಾಗುತ್ತಿದೆ. ಆದರೆ 223 ದೇವಾಲಯಗಳ ಅರ್ಚಕರಿಗೆ ಮಾಸಿಕ ತಸ್ತೀಕ್​ ಹಣ ನೀಡುತ್ತಿದ್ದು, ಸರ್ಕಾರದ ಈ ನಿಲುವು ದೇವರು&ದೇವರ ನಡುವಿನ ತಾರತಮ್ಯವೊ ಇಲ್ಲ ಅರ್ಚಕರ ನಡುವಿನ ತಾರತಮ್ಯವೋ ತಿಳಿಯದಾಗಿದೆ.